ಪೌರಾಣಿಕ ಪ್ರಸಿದ್ಧಿ ಹೊಂದಿರುವ ಪುರಿ ಜಗನ್ನಾಥನ ವಾರ್ಷಿಕ ರಥೋತ್ಸವವನ್ನು ಕೋವಿಡ್-19 ಕಾರಣಗಳಿಂದಾಗಿ ಈ ಬಾರಿ ಸಾರ್ವಜನಿಕರಿಗೆ ನಿರ್ಬಂಧದ ನಡುವೆಯೇ ಹಮ್ಮಿಕೊಳ್ಳಲಾಗುವುದು ಎಂದು ಒಡಿಶಾ ಸರ್ಕಾರ ತಿಳಿಸಿದೆ.
ಸಾಂಕ್ರಮಿಕದ ಕಾರಣದಿಂದಾಗಿ ಕಳೆದ ವರ್ಷದ ರಥೋತ್ಸವವನ್ನು ಹೇಗೆ ಆಚರಿಸಬೇಕೆಂದು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ನೀಡಿತ್ತೋ, ಅದೇ ರೀತಿಯಲ್ಲಿ ಈ ವರ್ಷವೂ ರಥೋತ್ಸವ ಆಚರಿಸಲು ನಿರ್ಧರಿಸಲಾಗಿದೆ.
ಜಗನ್ನಾಥರೊಂದಿಗೆ ಅತನ ಒಡಹುಟ್ಟಿದವರಾದ ಬಾಲಭದ್ರ ಹಾಗೂ ಸುಭದ್ರೆಯರ ರಥೋತ್ಸವ ವೇಳೆ ಭಾಗಿಯಾಗಲಿರುವ ಸಿಬ್ಬಂದಿಗೆ ಮೊದಲು ಕೋವಿಡ್ ಪರೀಕ್ಷೆ ನಡೆಸಿ, ನೆಗೆಟಿವ್ ಬಂದವರಿಗೆ ಮಾತ್ರವೇ ಅವಕಾಶ ಕೊಡಲಾಗುವುದು ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತರಾದ ಪ್ರದೀಪ್ ಕೆ ಜೆನಾ ತಿಳಿಸಿದ್ದಾರೆ.
ಯಾವಾಗಲಾದರೂ ಫ್ರೆಂಡ್ಸ್ ಜೊತೆ ಒಮ್ಮೆ ಈ ʼಜಾಗʼಗಳಿಗೆ ಹೋಗಿ ಬನ್ನಿ
ಪ್ರತಿ ವರ್ಷ ವಿದೇಶೀ ಯಾತ್ರಿಗಳನ್ನು ಸೇರಿ ಲಕ್ಷಾಂತರ ಮಂದಿ ಭೇಟಿ ಕೊಡುತ್ತಿದ್ದ ಜಗನ್ನಾಥ ರಥಯಾತ್ರೆಗೆ 2020 ಹಾಗೂ 2021ರಲ್ಲಿ ಸಾರ್ವಜನಿಕರಿಗೆ ಕೋವಿಡ್ ಕಾರಣದಿಂದ ನಿರ್ಬಂಧ ಹೇರಲಾಗಿದೆ.
ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ರಥವನ್ನು ಎಳೆಯಲು 500ಕ್ಕಿಂತ ಹೆಚ್ಚಿನ ಮಂದಿಗೆ ಅವಕಾಶವಿಲ್ಲ.
ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತೆ ನಿಮ್ಮ ಉಡುಗೆ
ಜಗನ್ನಾಥ ಮಂದಿರದಿಂದ ಹತ್ತಿರದ ಗುಂಡಿಚ ದೇಗುಲಕ್ಕೆ ರಥವನ್ನು ಎಳೆಯುವ ಈ ವಾರ್ಷಿಕ ಉತ್ಸವವು ಒಂಬತ್ತು ದಿನಗಳ ಕಾಲ ನೆರವೇರಲಿದ್ದು, ಮೂರೂ ದೇವತೆಗಳು ಮರಳಿ ಜಗನ್ನಾಥನ ಮಂದಿರಕ್ಕೆ ಮರಳುತ್ತಲೇ ಉತ್ಸವಕ್ಕೆ ತೆರೆ ಬೀಳಲಿದೆ.
ಮರಗಳಿಂದ ಮಾಡಲ್ಪಟ್ಟ ರಥಗಳಾದ ನಂದಿಘೋಷ (ಜಗನ್ನಾಥನಿಗೆ), ತಳಧ್ವಜ (ಬಾಲಭದ್ರನಿಗೆ) ಹಾಗೂ ದೇವದಾಲನ (ಸುಭದ್ರೆಗೆ) ಮೂಲಕ ದೇವತೆಗಳನ್ನು ಎರಡೂ ಸ್ಥಳಗಳ ನಡುವೆ ಕರೆದೊಯ್ಯುವ ಸಂಪ್ರದಾಯ 12ನೇ ಶತಮಾನದಿಂದಲೂ ಇದೆ.