
ಈ ಕಾಣಿಕೆ ಪ್ರಮಾಣವು ಕ್ರಮೇಣವಾಗಿ ಹೆಚ್ಚಾಗಿದ್ದು ಬೆಳ್ಳಿ ಪ್ರಮಾಣವು 336 ಕೆಜಿಗೆ ಹಾಗೂ ಚಿನ್ನದ ಪ್ರಮಾಣವು 69 ಕೆಜಿಗೆ ಏರಿಕೆ ಕಂಡಿತ್ತು ಎಂದು ಹೇಳಿದ್ದಾರೆ. ಈ ವರ್ಷ ನಾವು 69ನೇ ವರ್ಷದ ಗಣೇಶ ಚತುರ್ಥಿ ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಚಂದ್ರಯಾನ 3 ಯಶಸ್ಸು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಗಣಪತಿಗೆ ಧನ್ಯವಾದ ಅರ್ಪಿಸಲು ಮಂಗಳವಾರ ವಿಶೇಷ ಯಾಗ ಆಯೋಜಿಸಲಾಗಿದೆ. ಅಲ್ಲದೇ ಅಯೋಧ್ಯೆ ರಾಮಮಂದಿರ ನಿರ್ಮಾಣದ ಪ್ರಯುಕ್ತವೂ ಬುಧವಾರ ಮತ್ತೊಂದು ಹೋಮ ಹವನ ನಡೆಯಲಿದೆ ಎಂದು ಗೌಡ ಸಾರಸ್ವತ ಸೇವಾ ಮಂಡಲ ತಿಳಿಸಿದೆ.
ಇನ್ನು ಈ ಮೂರ್ತಿ ನಿರ್ಮಾಣಕ್ಕೆ 360.45 ಕೋಟಿ ರೂಪಾಯಿ ಮೌಲ್ಯದ ಇನ್ಶುರೆನ್ಸ್ ಪಡೆಯಲಾಗಿದೆ. ಭದ್ರತೆಗಾಗಿ ಅತ್ಯುನ್ನತ ಗುಣಮಟ್ಟದ ಕ್ಯಾಮರಾ ಸೇರಿದಂತೆ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ ಎಂದು ಗೌಡ ಸಾರಸ್ವತ ಸೇವಾ ಮಂಡಲ ತಿಳಿಸಿದೆ.