alex Certify ನಾಳೆ ‘ಕೇದಾರ್ ನಾಥ್ ಕುರಿ ಫಾರಂ’ ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ ಲೂಸ್ ಮಾದ ಯೋಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ‘ಕೇದಾರ್ ನಾಥ್ ಕುರಿ ಫಾರಂ’ ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ ಲೂಸ್ ಮಾದ ಯೋಗಿ

ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ಅಭಿನಯಿಸಿರುವ ‘ಕೇದಾರ್ ನಾಥ್ ಕುರಿ ಫಾರಂ’ ಚಿತ್ರದ ಟೀಸರ್ ನಾಳೆ ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದ್ದು, ನಟ ಲೂಸ್ ಮಾದ ಯೋಗಿ ಅವರ ಕೈಯಲ್ಲಿ ಈ ಟೀಸರನ್ನು ಬಿಡುಗಡೆಗೊಳಿಸಲಿದ್ದಾರೆ. ಈ ಕುರಿತು ಚಿತ್ರತಂಡ ಇಂದು ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.

ಶ್ರೀನಿವಾಸ್ ಸಾಗರ್ ನಿರ್ದೇಶನದ ಈ ಚಿತ್ರದಲ್ಲಿ ಮಡೆನೂರ್ ಮನು ಸೇರಿದಂತೆ ಟೆನ್ನಿಸ್ ಕೃಷ್ಣ, ಕರಿಸುಬ್ಬು, ಶಿವಾನಿ, ಸುನಂದಾ, ಮುತ್ತುರಾಜ್ ಬಣ್ಣ ಹಚ್ಚಿದ್ದಾರೆ. ಸನ್ನಿ ಡಾನ್ ಅಬ್ರಹಾಂ ಸಂಗೀತ ಸಂಯೋಜನೆ ನೀಡಿದ್ದು, ಕೆಎಂ ಪ್ರಕಾಶ್ ಸಂಕಲನ, ರಾಜೇಶ್ ಸಾಲುಂಡಿ ಅವರ ಸಂಭಾಷಣೆ, ಹಾಗೂ ರಾಕೇಶ್ ತಿಲಕ್ ಛಾಯಾಗ್ರಹಣವಿದೆ.

— A2 Music (@A2MusicSouth) September 6, 2024

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...