![](https://kannadadunia.com/wp-content/uploads/2021/12/968092-sushmita-sen.jpg)
ಭಾರತದ ಮೊದಲ ವಿಶ್ವ ಸುಂದರಿಯಾಗಿದ್ದ ನಟಿ ಸುಶ್ಮಿತಾ ಸೇನ್ ಅವರು ತಮ್ಮದೇ ಷರತ್ತುಗಳ ಮೇಲೆ ಬದುಕುತ್ತಿರುವ ಮಹಿಳೆ. ಚಿಕ್ಕ ವಯಸ್ಸಿನಲ್ಲೇ ಇಬ್ಬರು ಅನಾಥ ಮಕ್ಕಳ ಸಿಂಗಲ್ ಪೇರೆಂಟ್ ಆದ ಗಟ್ಟಿಗಿತ್ತಿ. ಸುಶ್ಮಿತಾಗೆ ರೆನೀ ಮತ್ತು ಅಲಿಶಾ ಎಂಬ ಇಬ್ಬರು ದತ್ತು ಪುತ್ರಿಯರಿದ್ದಾರೆ. ತಮ್ಮ ವೈಯಕ್ತಿಕ ಜೀವನದಿಂದ ಯಾವಾಗಲೂ ಚರ್ಚೆಯಲ್ಲಿರುವ ಸುಷ್ಮಿತಾ, ಇತ್ತೀಚೆಗಷ್ಟೇ ತನ್ನ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ನೊಂದಿಗೆ ಸಂಬಂಧ ಅಂತ್ಯಗೊಳಿಸಿದ್ದರು.
ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟ್ ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈಗ ಅವರು 2021 ರಲ್ಲಿ ತಮ್ಮ ಜೀವನದ ಏರಿಳಿತಗಳ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅವರ ಸುಂದರವಾದ ಮತ್ತು ನಗುತ್ತಿರುವ ಚಿತ್ರವನ್ನು ಹಂಚಿಕೊಂಡು, ಈ ಪೋಸ್ಟ್ ಮೂಲಕ 2021 ರ ತಮ್ಮ ಜೀವನದ ಪ್ರಯಾಣವನ್ನು ಹೇಳಿದ್ದಾರೆ.
RRR ಚಿತ್ರಕ್ಕೆ ಆಲಿಯಾ ಬ್ಯಾಡ್ ಲಕ್, ವಿವಾದಕ್ಕೀಡಾದ ಕೆಆರ್‌ಕೆ ಹೇಳಿಕೆ
‘ಒಬ್ಬ ಹುಡುಗಿ ಅಭಿನಂದನೆಗಳನ್ನು ಪ್ರೀತಿಸುತ್ತಾಳೆ, ಈ ವಿಷಯದಲ್ಲಿ ನಾನು ತುಂಬಾ ಅದೃಷ್ಟಶಾಲಿ, ನನ್ನ ಜೀವನದಲ್ಲಿ ಅಭಿನಂದನೆಗಳಿಗೆ ಕೊರತೆಯಿಲ್ಲ. ನೀವೆಲ್ಲರೂ ನನ್ನ ಜೀವನದ ಪ್ರಮುಖ ಭಾಗವಾಗಿದ್ದೀರಿ. ಈ ಪ್ರಯಾಣದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. 2021ರಲ್ಲಿ ಸಾಕಷ್ಟು ಏರಿಳಿತ ಕಂಡರು ಈ ವರ್ಷವು ನನಗೆ ತೃಪ್ತಿಕರವಾಗಿದೆ. ನಾವು ವರ್ಷಾಂತ್ಯಕ್ಕೆ ಹತ್ತಿರವಾಗುತ್ತಿದ್ದೇವೆ. ನನ್ನ ಜೀವನದಲ್ಲಿ ನಾನು ಹೊಸತನವನ್ನು ಅನುಭವಿಸುತ್ತಿದ್ದೇನೆ. ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ. 2022 ಎಲ್ಲರ ಪಾಲಿಗು ಅದ್ಭುತವಾಗಿರಲಿ. ಧನಾತ್ಮಕವಾಗಿರಿ, ನಂಬಿಕೆಯನ್ನು ಹೊಂದಿರಿ ಮತ್ತು ಸಂತೋಷವಾಗಿರಿ ಎಂದು ಅಭಿಮಾನಿಗಳಿಗೆ ಸುಷ್ಮಿತಾ ಸಂದೇಶ ನೀಡಿದ್ದಾರೆ.
![](https://kannadadunia.com/wp-content/uploads/2021/12/1eb2b724-9aab-4188-9d88-6b59b67ed29a.jpg)