alex Certify ಅಮೆಜಾನ್​ನಲ್ಲಿ ಆರ್ಡರ್​ ಮಾಡಿದ್ದೇ ಒಂದು; ಬಂದದ್ದು ʼಲಡ್ಡು ಬೇಕೆʼ ಪುಸ್ತಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆಜಾನ್​ನಲ್ಲಿ ಆರ್ಡರ್​ ಮಾಡಿದ್ದೇ ಒಂದು; ಬಂದದ್ದು ʼಲಡ್ಡು ಬೇಕೆʼ ಪುಸ್ತಕ….!

ಆನ್​ಲೈನ್​ನಲ್ಲಿ ಒಂದನ್ನು ಆರ್ಡರ್​ ಮಾಡಿದರೆ ಇನ್ನೊಂದು ಬರುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಆರ್ಡರ್​ ಮಾಡಿದ್ದು, ಪುಸ್ತಕವಾಗಿದ್ದರೆ, ಪುಸ್ತಕವೇ ಬಂದಿದೆ. ಆದರೆ ಬಂದದ್ದು ಮಾತ್ರ ಆರ್ಡರ್​ ಮಾಡಿದ ಪುಸ್ತಕವಲ್ಲ, ಇದರ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಕಾಶಿಶ್ ಎನ್ನುವವರು ಅಮೆಜಾನ್‌ನಲ್ಲಿ ಪುಸ್ತಕಕ್ಕಾಗಿ ಆರ್ಡರ್ ಮಾಡಿದ್ದರು. ಅವರಿಗೆ ಬಂದದ್ದು ‘ಲುಕಿಂಗ್ ಫಾರ್ ಲಡ್ಡೂ’ ಎಂಬ ಪುಸ್ತಕ! ನನಗೆ ಲಡ್ಡು ಬೇಡ ಸರ್…​… ನಾನು ಹೇಳಿದ ಪುಸ್ತಕ ಕಳುಹಿಸಿ ಎಂದು ಕಾಶಿಶ್​ ಅವರು ಅಮೆಜಾನ್​ನಲ್ಲಿ ದೂರು ದಾಖಲಿಸಿದ್ದಾರೆ. ನಂತರ ಸಂಸ್ಥೆಯು ಅವರಿಗೆ ಕ್ಷಮೆಯಾಚಿಸಿದೆ. ನೀವು ಆರ್ಡರ್​ ಮಾಡಿದ ಪುಸ್ತಕ ನಮ್ಮ ಬಳಿ ಇದೆ. ಆದರೆ ಅದು ಓಲ್ಡ್​ ಸ್ಟಾಕ್​ ಆಗಿದೆ. ನಿಮಗೆ ಹೊಸತನ್ನು ಕಳಿಸುತ್ತೇವೆ ಎಂದಿದೆ.

ಇದನ್ನು ನೋಡಿ ಟ್ವಿಟರ್ ಬಳಕೆದಾರರು ಥರಹೇವಾರಿ ಕಮೆಂಟ್​ ಮಾಡುತ್ತಿದ್ದಾರೆ. ‘ಲುಕಿಂಗ್ ಫಾರ್ ಲಡ್ಡೂ’ ಲೇಖಕಿ ಅಪರ್ಣಾ ಕಾರ್ತಿಕೇಯನ್ ಕೂಡ ಧ್ವನಿಗೂಡಿಸಿದ್ದಾರೆ. “ಆಹ್, ನಿಮಗೆ ಬೇಕಾದದ್ದು ಸಿಗದಿದ್ದಾಗ ನಿಮಗೆ ಲಡ್ಡು ಬೇಕು ಎಂದು ಅಮೆಜಾನ್​ ಭಾವಿಸಿರಬೇಕು ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ಅನೇಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...