alex Certify ದೀರ್ಘ ಚುಂಬನಕ್ಕಾಗಿಯೂ ಇತ್ತು ʼಗಿನ್ನಿಸ್‌ ವಿಶ್ವ ದಾಖಲೆʼ ಸ್ಪರ್ಧೆ…! ಇದನ್ನು ನಿಲ್ಲಿಸಿದ್ದರ ಹಿಂದಿದೆ ಈ ʼಕಾರಣʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀರ್ಘ ಚುಂಬನಕ್ಕಾಗಿಯೂ ಇತ್ತು ʼಗಿನ್ನಿಸ್‌ ವಿಶ್ವ ದಾಖಲೆʼ ಸ್ಪರ್ಧೆ…! ಇದನ್ನು ನಿಲ್ಲಿಸಿದ್ದರ ಹಿಂದಿದೆ ಈ ʼಕಾರಣʼ

ಹಲವಾರು ರೀತಿಯ ಗಿನ್ನಿಸ್ ವಿಶ್ವದಾಖಲೆಗಳಿವೆ. ಆದರೆ, ದೀರ್ಘಕಾಲದ ಕಿಸ್ ವಿಶ್ವ ದಾಖಲೆ ಎಂಬ ವಿಭಾಗವೊಂದಿತ್ತು ಎಂಬುದು ನಿಮಗೆ ತಿಳಿದಿದೆಯೇ? ಹೌದು, ದೀರ್ಘ ಚುಂಬನದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗಾಗಿ ಸ್ಪರ್ಧೆ ಈಗಿಲ್ಲ. ಇದನ್ನು 2013 ರಲ್ಲಿ ಕಿತ್ತೊಗೆಯಲಾಯಿತು. ಏಕೆಂದರೆ ಸ್ಪರ್ಧೆಯು ತುಂಬಾ ಅಪಾಯಕಾರಿಯಾಗಿದೆ ಎಂಬುದನ್ನು ಮನಗಂಡು ಈ ಸ್ಪರ್ಧೆಯನ್ನು ನಿಲ್ಲಿಸಲಾಯಿತು.

ದೀರ್ಘ ಚುಂಬನಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆಯ ನಿಯಮಗಳೇನಿದ್ದವು ?

– ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಉಲ್ಲೇಖಿಸಿದಂತೆ, ಎಷ್ಟು ಸಮಯದವರೆಗೆ ಚುಂಬಿಸುತ್ತೀರಿ ಅನ್ನೋದು ಮುಖ್ಯವಾಗಿದೆ. ತುಟಿಗಳು ಬೇರ್ಪಟ್ಟಿರಬಾರದು. ಒಬ್ಬರಿಗೊಬ್ಬರ ತುಟಿಗಳು ಸ್ಪರ್ಶಿಸಿಯೇ ಇರಬೇಕು. ಒಂದುವೇಳೆ ತುಟಿಗಳು ವಿಭಜನೆಯಾದರೆ ಆ ಜೋಡಿ ಸ್ಪರ್ಧೆಯಿಂದ ಅನರ್ಹರಾಗುತ್ತಾರೆ. ಈ ವೇಳೆ ಯಾವುದೇ ದ್ರವಾಹಾರ ಸೇವಿಸಬಹುದು. ಆದರೆ, ತುಟಿಗಳು ಸ್ಪರ್ಶಿಸಿರಬೇಕು.

– ದಂಪತಿಗಳು ಯಾವಾಗಲೂ ಎಚ್ಚರವಾಗಿರುವುದು ಮುಖ್ಯ. ನಿದ್ದೆ ಹೋಗಬಾರದು. ನಿರಂತರವಾಗಿ ಚುಂಬಿಸುತ್ತಲೇ ಇರಬೇಕು.

– ವಿಶ್ರಾಂತಿ ವಿರಾಮಗಳನ್ನು ಅನುಮತಿಸಲಾಗುವುದಿಲ್ಲ.

– ಈ ವೇಳೆ ನ್ಯಾಪಿ ಅಥವಾ ಡೈಪರ್‌ಗಳು ಅಥವಾ ಪ್ಯಾಡ್‌ಗಳನ್ನು ಧರಿಸುವಂತಿಲ್ಲ. ಜೋಡಿಗಳು ಶೌಚಾಲಯವನ್ನು ಬಳಸಲು ಅನುಮತಿಸಲಾಗಿದೆ. ಆದರೆ, ಶೌಚಾಲಯಕ್ಕೆ ಹೋಗುವಾಗ, ಶೌಚ ಮಾಡುವಾಗಲೂ ಚುಂಬಿಸುತ್ತಲೇ ಇರಬೇಕು.

ಸ್ಪರ್ಧೆಯನ್ನು ನಿಲ್ಲಿಸಿದ್ದೇಕೆ ?

ಸ್ಪರ್ಧೆಯಲ್ಲಿ ವಿಶ್ರಾಂತಿ ಮಾಡದೇ ಇರೋ ಕಾರಣ ಹಾಗೂ ದಾಖಲೆ ಮಾಡಿರುವವರನ್ನು ಸೋಲಿಸಲು ದಾಖಲೆಯು ಹೆಚ್ಚು ದೀರ್ಘವಾಗುತ್ತದೆ. ಇದರಿಂದ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ನಿದ್ರಾಹೀನತೆಗೆ ಸಂಬಂಧಿಸಿದ ಅಪಾಯಗಳಿಗೆ ಒಳಗಾಗುವ ಸಾಧ್ಯತೆಯಿದೆ. ಹೀಗಾಗಿ ಇದನ್ನು ನಿಲ್ಲಿಸಲಾಯಿತು.

1999 ರಲ್ಲಿ, ಇಸ್ರೇಲ್‌ನ ರೆಕಾರ್ಡ್ ಹೋಲ್ಡರ್‌ಗಳಾದ ಕರ್ಮಿತ್ ಟ್ಜುಬೆರಾ ಮತ್ತು ಡ್ರೊರ್ ಒರ್ಪಾಜ್ ಅವರು 30 ಗಂಟೆಗಳ 45 ನಿಮಿಷಗಳ ಕಾಲ ಚುಂಬಿಸಿದ ನಂತರ ಅಸ್ವಸ್ಥತೆಗೆ ಒಳಗಾದ್ರು. ಅವರು ಸ್ಪರ್ಧೆಯಲ್ಲಿ ಗೆದ್ದಿದ್ದರೂ, ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು, ಅಲ್ಲಿ ಅವರು ಆಯಾಸದಿಂದ ಚಿಕಿತ್ಸೆ ಪಡೆದ್ರು. ಇಂಥ ಕಾರಣಗಳನ್ನು ಮನಗಂಡು ಗಿನ್ನಿಸ್ ವಿಶ್ವದಾಖಲೆ ಸ್ಪರ್ಧೆಯಿಂದ ದೀರ್ಘ ಚುಂಬನ ಸ್ಪರ್ಧೆಯನ್ನು ನಿಷೇಧಿಸಲಾಯಿತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...