ಒಂಟಿತನ ಎಂಬುದು ಬಹಳ ಆಳವಾದ ಅರ್ಥವುಳ್ಳ ಭಾವನೆ. ಜನಸಂದಣಿಯಲ್ಲಿಯೂ ಒಬ್ಬಂಟಿಯಾಗಿದ್ದೇನೆ ಎನಿಸಿದರೆ ಅದೊಂದು ರೀತಿಯ ಸಮಸ್ಯೆಯಾಗಿಬಿಡುತ್ತದೆ. ಫೋನ್‌ನಲ್ಲಿ ನೂರಾರು ಜನರೊಂದಿಗೆ ಸಂಪರ್ಕವಿರುತ್ತದೆ, ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ಸ್ನೇಹಿತರಿರುತ್ತಾರೆ. ಆದರೂ ಹೃದಯದ ಭಾವನೆಗಳನ್ನು ಹಂಚಿಕೊಳ್ಳಲು ಯಾರೂ ಇರುವುದಿಲ್ಲ.
ಇಂತಹ ಒಂಟಿತನದ ಭಾವನೆಯನ್ನು ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರು ಎದುರಿಸುತ್ತಿದ್ದಾರೆ. ಅಧ್ಯಯನವೊಂದರಲ್ಲಿ ಈ ಸಂಗತಿ ಬಹಿರಂಗವಾಗಿದೆ. ಅದರಲ್ಲಿಯೂ ಒಂಟಿ ಹುಡುಗರ ಸಂಖ್ಯೆಯೇ ಹೆಚ್ಚು. ಪಾರ್ಟ್‌ನರ್‌ಗಳ ಕೊರತೆಯೇ ಇದಕ್ಕೆ ಕಾರಣ ಎನ್ನುತ್ತಾರೆ ಸಂಶೋಧಕರು.
ಮಾನಸಿಕ ಆರೋಗ್ಯಕ್ಕೆ ಸಂಬಂಧ ಮುಖ್ಯ
ಸಾಮಾನ್ಯವಾಗಿ ಸಮಸ್ಯೆಗಳ ಮೂಲ ಎಂದು ನಾವು ಪರಿಗಣಿಸುವ ಸಂಬಂಧವು ನಮ್ಮ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡುತ್ತದೆ. ಪ್ರತಿಯೊಬ್ಬರಿಗೂ ಸಂಗಾತಿ ಬೇಕು. ಒಬ್ಬ ವ್ಯಕ್ತಿ ಮಾನಸಿಕ ಸಮಸ್ಯೆಗಳಿಂದ ದೂರವಿರಲು ಪ್ರೀತಿಯ ಸಂಬಂಧವು ಸಹಾಯ ಮಾಡುತ್ತದೆ.
ಹೆಚ್ಚುತ್ತಿರುವ ಮತ್ತು ಬದಲಾಗುತ್ತಿರುವ ಡೇಟಿಂಗ್ ಮಾನದಂಡಗಳು ಮತ್ತು ಸ್ಪರ್ಧೆ, ಕೌಶಲ್ಯಗಳಲ್ಲಿನ ಕುಸಿತದಿಂದಾಗಿ ಸಂಗಾತಿಯನ್ನು ಹುಡುಕಲು ಪುರುಷರಿಗೆ ತುಂಬಾ ಕಷ್ಟವಾಗುತ್ತಿದೆ. ಈ ಸಮಸ್ಯೆ ಪುರುಷರಲ್ಲೇ ಹೆಚ್ಚು. ಪರಿಣಾಮ ಹುಡುಗಿಯರಿಗಿಂತ ಹೆಚ್ಚು ಒಂಟಿತನವನ್ನು ಹುಡುಗರು ಎದುರಿಸುತ್ತಾರೆ.
ಸಂಗಾತಿಯಿಲ್ಲದೆ ಬದುಕುವ ಅನಾನುಕೂಲಗಳು
ಒಂಟಿತನದಿಂದ ಬಳಲುವ ವ್ಯಕ್ತಿಯು ಮಾದಕ ದ್ರವ್ಯ ಸೇವನೆ, ಖಿನ್ನತೆ, ಆತ್ಮಹತ್ಯೆ ಇತ್ಯಾದಿಗಳಿಗೆ ಗುರಿಯಾಗುತ್ತಾನೆ. ದೀರ್ಘಕಾಲದ ಒಂಟಿತನವು ದೈಹಿಕ ಆರೋಗ್ಯಕ್ಕೂ ಹಾನಿಕಾರಕವಾಗಿದೆ.
ವರದಿ ಪ್ರಕಾರ ಮದುವೆ ಪುರುಷರಿಗೆ ಆರೋಗ್ಯಕರ. ವಿವಾಹಿತ ಪುರುಷರು ಹೃದ್ರೋಗದಿಂದ ಬಳಲುವ ಸಾಧ್ಯತೆ ಕಡಿಮೆ. ಕ್ಯಾನ್ಸರ್ ಮತ್ತು ಆಲ್ಝೈಮರ್‌ನಂತಹ ಗಂಭೀರ ಕಾಯಿಲೆಗಳನ್ನು ಹೆಚ್ಚಾಗಿ ಎದುರಿಸುವುದಿಲ್ಲ. ಇದಲ್ಲದೆ ಆರ್ಥಿಕವಾಗಿಯೂ ಸಮರ್ಥರಾಗಿರುತ್ತಾರೆ.