alex Certify BIG NEWS: ಅಕ್ರಮ ವಿದ್ಯುತ್ ತಂತಿ ಬೇಲಿಗೆ ಒಂಟಿ ಸಲಗ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಕ್ರಮ ವಿದ್ಯುತ್ ತಂತಿ ಬೇಲಿಗೆ ಒಂಟಿ ಸಲಗ ಬಲಿ

ಚಾಮರಾಜನಗರ: ಜಮೀನಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿ ತಗುಲಿ ಒಂಟಿಸಲಗ ಬಲಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ.

ಕುರುಬರಹುಂಡಿ ಗ್ರಾಮದಲ್ಲಿ ಈ ದುರತ ಸಂಭವಿಸಿದೆ. ಜಮೀನು ಮಾಲೀಕ ಶಿವರಾಜು ತನ್ನ ಜಮೀನು ರಕ್ಷಣೆಗಾಗಿ ತಂತಿಬೇಲಿ ಅಳವಡಿಸಿ ಅದಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ. ಈ ತಂತಿಬೇಲಿ ತಗುಲಿ ಆನೆ ಮೃತಪಟ್ಟಿದೆ.

ಘಟನೆ ಬಳಿಕ ಜಮೀನು ಮಾಲೀಕ ಶಿವರಾಜು ಪರಾರಿಯಾಗಿದ್ದಾನೆ. ಅರಣ್ಯ ಅಧಿಕಾರಿಗಳು ಆರೋಪಿಗಾಗಿ ಶೋಧ ನಡೆಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...