18 ವರ್ಷ, ಈ ವಯಸ್ಸಿಗೆ ಅಬ್ಬಬ್ಬಾ ಅಂದ್ರೆ ಏನೇನು ಯೋಚನೆ ಬರಬಹುದು ಹೇಳಿ. ಮೋಜು, ಮಸ್ತಿ ಮಾಡ್ಬೇಕು, ಫ್ರೆಂಡ್ಸ್ ಜೊತೆ ಸೇರ್ಕೊಂಡು ಪಾರ್ಟಿ ಮಾಡ್ಬೇಕು ಅಂತಷ್ಟೆ ತಲೆಯಲ್ಲಿ ಬರುತ್ತೆ. ಆದರೆ ಲಂಡನ್ಲ್ಲಿ ಇರುವ ಯುವತಿ ಕೂಡಿಟ್ಟೇ 3.70 ಕೋಟಿಯ ಮನೆಯನ್ನ ಖರೀದಿ ಮಾಡಿದ್ದಾಳೆ.
ನಿಜಕ್ಕೂ ಎಲ್ಲರೂ ಬೆರಗಾಗುವ ವಿಚಾರ ಇದು. ಕೇವಲ 18 ವರ್ಷ ಇರುವಾಗಲೇ ಕೋಟಿ ಕೋಟಿ ರೂಪಾಯಿ ಕೊಟ್ಟು ಒಂದು ಮನೆ ಕೊಂಡು ಕೊಳ್ಳುವುದು ಅಂದ್ರೆ ಸಾಮಾನ್ಯದ ಮಾತಂತೂ ಅಲ್ಲವೇ ಅಲ್ಲ.
ಎಷ್ಟೋ ಜನರು ಒಂದು ಸ್ವಂತ ಮನೆ ಕಟ್ಟುವುದಕ್ಕೆ ಪಡಬಾರದ ಕಷ್ಟ ಪಡುತ್ತಾರೆ. ಆದರೆ ಈಗ ಕೇವಲ 18 ವರ್ಷ ವಯಸ್ಸಿಗೆ ಸ್ವಂತ ಮನೆ ಖರೀದಿ ಮಾಡಿದ್ದಾಳೆ. ಅಷ್ಟಕ್ಕೂ ಹೀಗೆ ಮನೆ ಖರೀದಿ ಮಾಡಿರುವ ಈ ಯುವತಿಯ ಹೆಸರು ವೆಲಂಟಿನಾ ಹ್ಯಾಡ್ವೊಮ್. ಈಕೆ 13ವರ್ಷ ವಯಸ್ಸಿರುವಾಗಲೇ ಮನೆಗೆಂದು ದುಡ್ಡನ್ನ ಉಳಿತಾಯ ಮಾಡುವುದಕ್ಕೆ ಆರಂಭ ಮಾಡಿದ್ದಾಳೆ. ತನಗೆ ಖರ್ಚಿಗೆ ಪಾಕೆಟ್ ಮನಿ ಸಿಕ್ಕರೆ ಸಾಕು ಮನೆ ಖರೀದಿಗೆಂದು ದುಡ್ಡನ್ನ ತೆಗೆದು ಇಡುತ್ತಿದ್ದಳು. ಈಗ ನೋಡಿ ಕೇವಲ 5 ವರ್ಷಕ್ಕೆನೇ ಒಂದು ಮನೆ ಖರೀದಿ ಮಾಡಿದ್ದಾಳೆ.
ವೆಲಂಟಿನಾ ಹ್ಯಾಡ್ಮೊಮ್ 3.70 ಕೋಟಿ ರೂಪಾಯಿಯ ಒಂದು ಮನೆ ಖರೀದಿ ಮಾಡಿದ್ದಾಳೆಂದರೆ ಅದು ಸಾಮಾನ್ಯ ಮಾತಲ್ಲ. ಅಸಲಿಗೆ ಆಕೆ ವಿನಾಕಾರಣ ಮೇಕಪ್ ಸಾಮಗ್ರಿಗಳ ಮೇಲೆ ಖರ್ಚು ಮಾಡುವುದನ್ನ ಮೊದಲು ನಿಲ್ಲಿಸಿದಳು. ಆ ನಂತರ ಆಕೆ ಹೊಟೇಲ್ ಹಾಗೂ ಬೇರೆ ಬೇರೆ ಕಡೆಗಳಲ್ಲಿ ಖರ್ಚು ಮಾಡುವುದನ್ನ ಕೂಡಾ ನಿಲ್ಲಿಸಿದ್ದಾಳೆ. ಇನ್ನೂ ಕಾಮಿಕ್ಸ್ ಹಾಗೂ ಬೇರೆ ಬೇರೆ ಪುಸ್ತಕಗಳಿಗೆ ಕಥೆಗಳನ್ನ ಬರೆದು ಹಣವನ್ನ ಗಳಿಸಿದ್ದಾಳೆ. ಆ ಎಲ್ಲ ಹಣವನ್ನ ಉಳಿಸಿಯೇ ಇಂದು ಒಂದು ಸ್ವಂತ ಮನೆ ತನ್ನ ಹೆಸರಿಗೆ ಮಾಡಿಕೊಂಡಿದ್ದಾಳೆ.
ಈಕೆ 16 ವರ್ಷದವಳಿದ್ದಾಗಲೇ ಶಾಲೆಗೆ ಹೋಗುವುದರ ಜೊತೆ ಜೊತೆಗೆ ಪಾರ್ಟ್ ಟೈಂ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಅಷ್ಟೆ ಅಲ್ಲ ಉಳಿದ ಸಮಯದಲ್ಲಿ ಬೇರೆ ಬೇರೆ ಚಟುವಟಿಕೆಗಳಲ್ಲಿ ತನ್ನನ್ನ ತಾನು ತೊಡಗಿಸಿಕೊಂಡಿದ್ದಾಳೆ. ಇದರಿಂದ ಆಕೆ ಹಣ ಕೂಡಾ ಗಳಿಸಿದ್ದಾಳೆ. ಕೊನೆಗೆ ಈ ಎಲ್ಲ ಹಣವನ್ನ ಸೇರಿಸಿ ಐಶಾರಾಮಿ ಮನೆಯನ್ನೇ ಖರೀದಿ ಮಾಡಿ, ಬೇರೆಯವರಿಗೆ ಮಾದರಿಯಾಗಿದ್ದಾಳೆ.
ಚಿಕ್ಕವಳಿದ್ದಾಗಿನಿಂದಲೇ ಇದು ನನ್ನ ಕನಸಾಗಿತ್ತು. ನನ್ನದೇ ಆಗಿರುವ ಮನೆ ಖರೀದಿ ಮಾಡಬೇಕು ಅನ್ನೋದು ನನ್ನ ಕಸನಾಗಿತ್ತು. ನಾನು Insanity ಅನ್ನೋ ಕಾಮಿಕ್ ಪುಸ್ತಕಕ್ಕೆ ಬರಹಗಳನ್ನ ಬರೆದು ಸ್ವಲ್ಪ ದುಡ್ಡು ಮಾಡಿಟ್ಟುಕೊಂಡಿದ್ದೆ. ಈ ಎಲ್ಲ ದುಡ್ಡು ನನ್ನ ಅಮ್ಮನ ಕೈಗೆ ಕೊಡುತ್ತಿದ್ದೆ. ಆಗ ನಾನು ಚಿಕ್ಕವಳಿದ್ದರಿಂದ ನನ್ನ ಹೆಸರಲ್ಲಿ ಅಕೌಂಟ್ ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ನಾನು ಕಾಮಿಕ್ ಬರಹಗಳನ್ನ ಬರದೇ ಏನಿಲ್ಲ ಅಂದೂ 5 ಲಕ್ಷ ಹಣ ಗಳಿಸಿದ್ದೆ. ಅಷ್ಟಕ್ಕೂ ನಾನು ರಜಾ ದಿನಗಳಲ್ಲಿ ಈ ಕೆಲಸವನ್ನ ಮಾಡುತ್ತಿದ್ದರಿಂದ ನನಗೆ ಇದು ಕಷ್ಟಕರ ಕೆಲಸವಾಗಿರಲಿಲ್ಲ ಎಂದಿದ್ದಾಳೆ.
ನಿಜಕ್ಕೂ ವೆಲಂಟಿನಾಳಿಂದ ಸಮಯವನ್ನ ಹೇಗ್ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಅನ್ನೋದನ್ನ ಕಲಿಯಬೇಕಾಗಿದೆ. ಹಾಗಿದ್ದಲ್ಲಿ ಮಾತ್ರ ಇಂತಹದ್ದೊಂದು ಐಶಾರಾಮಿ ಮನೆಯನ್ನ ಕೊಂಡುಕೊಳ್ಳಬಹುದು.