ಲಂಡನ್: ಭಾರತಕ್ಕೆ ನೀರವ್ ಮೋದಿಯನ್ನು ಗಡಿಪಾರು ಮಾಡಲು ಬ್ರಿಟನ್ ಅನುಮತಿ ನೀಡಿದೆ. ಲಂಡನ್ ಗೃಹ ಸಚಿವಾಲಯದಿಂದ ಅನುಮತಿ ನೀಡಲಾಗಿದ್ದು, ಶೀಘ್ರವೇ ಭಾರತಕ್ಕೆ ಹಸ್ತಾಂತರಿಸಲಾಗುವುದು.
ಭಾರತದಲ್ಲಿ ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿ ಲಂಡನ್ ನಲ್ಲಿ ನೆಲೆಸಿರುವ ನೀರವ್ ಮೋದಿಯನ್ನು ಹಸ್ತಾಂತರಿಸಬೇಕೆಂದು ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರಯತ್ನ ನಡೆಸಲಾಗಿತ್ತು. ಲಂಡನ್ ಕೋರ್ಟ್ ನಲ್ಲಿಯೂ ವಿಚಾರಣೆ ನಡೆದಿತ್ತು.