ಕೊರೊನಾ ವೈರಸ್, ಲಾಕ್ಡೌನ್ ಮನುಷ್ಯರ ಮನಸ್ಸಿನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಮನೆಯಲ್ಲಿಯೇ ಲಾಕ್ ಆಗಿರುವ ಜನರು ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆ. ರೋಗ, ಸಾವಿನ ಭಯ ಅವರನ್ನು ಕಾಡ್ತಿದೆ. ಲಂಡನ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸುತಾ ಶಿವನಂಥಮ್ ಹೆಸರಿನ ಮಹಿಳೆ ತನ್ನ ಐದು ವರ್ಷದ ಮಗಳ ಹತ್ಯೆ ಮಾಡಿದ್ದಾಳೆ. 15 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ. ಈ ಹತ್ಯೆಗೆ ಕಾರಣ ದಂಗಾಗಿಸುವಂತಿದೆ.
ಸುತಾಗೆ ಕೊರೊನಾ ಭಯ ಶುರುವಾಗಿತ್ತಂತೆ. ಕೊರೊನಾದಿಂದ ತಾನು ಸಾಯ್ತೆನೆ. ನನ್ನ ಸಾವಿನ ನಂತ್ರ ಮಗಳು ಅನಾಥಳಾಗ್ತಾಳೆಂಬ ಭಯಕ್ಕೆ ಸುತಾ ಮಗುವನ್ನು ಹತ್ಯೆ ಮಾಡಿದ್ದಾಳೆ. ನಂತ್ರ ತಾನೂ ಚಾಕು ಇರಿದುಕೊಂಡಿದ್ದಾಳೆ. ಇಬ್ಬರನ್ನು ನೆರೆಯವರು ಆಸ್ಪತ್ರೆಗೆ ದಾಖಲಿಸಿದ್ದರು ಎನ್ನಲಾಗಿದೆ.
ಕೋರ್ಟ್ ನಲ್ಲಿ ಕಣ್ಣೀರಿಟ್ಟ ಪತಿ, ಮಗು ಹತ್ಯೆ ನಂತ್ರ ಪತ್ನಿ ಜೊತೆ ಮಾತನಾಡಿಲ್ಲ ಎಂದಿದ್ದಾನೆ. ಕೊರೊನಾದಿಂದಾಗಿ ಪತ್ನಿ ಮಾನಸಿಕ ಸ್ಥಿತಿ ಸರಿಯಿರಲಿಲ್ಲವೆಂದು ಆತ ಹೇಳಿದ್ದಾನೆ. ವೈದ್ಯರೂ ಕೂಡ ಸುತಾ, ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆಂದು ಹೇಳಿದ್ದಾರೆ. 2006ರಲ್ಲಿ ಸುತಾ ಮದುವೆಯಾಗಿತ್ತು. ಲಂಡನ್ ನಲ್ಲಿದ್ದ ಸುತಾಗೆ ಇಂಗ್ಲೀಷ್ ಬರ್ತಿರಲಿಲ್ಲ.