ಲಕ್ಷಗಟ್ಟಲೆ ಮನೆ ಬಾಡಿಗೆ ಪಡೆಯುತ್ತಿರುವ ಮನೆ ಮಾಲೀಕನೊಬ್ಬ ತಾನು ಮಾತ್ರ ಬೀದಿಯಲ್ಲಿ ಮಲಗುತ್ತಾನೆ ಎಂದರೆ ನಂಬುವಿರಾ ? ಅಂಥ ಒಬ್ಬ ವ್ಯಕ್ತಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಂಡನ್ ನ ಡೊಮ್ ಈಗ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ, ಸ್ವತಃ ನಿರಾಶ್ರಿತರಾಗಿರುವ ಮನೆ ಮಾಲೀಕನೀತ. ಪ್ರಸ್ತುತ ರೈಲ್ವೆ ನಿಲ್ದಾಣದಲ್ಲಿ ಮಲಗುತ್ತಿದ್ದಾನೆ. ಇದಕ್ಕೆ ಕಾರಣ, ತನ್ನ ಮನೆಯನ್ನು ಬಾಡಿಗೆಗೆ ನೀಡಿ ಅದರಿಂದ ಬರುವ ಆದಾಯವನ್ನು ಈತ ಮಾದಕ ವ್ಯಸನಕ್ಕೆ ಬಳಸಿಕೊಳ್ಳುವುದಂತೆ!
ಯೂಟ್ಯೂಬ್ ಚಾನೆಲ್ ದಿ ಟ್ಯಾಬೂ ಜತೆ ಸಂದರ್ಶನವೊಂದರಲ್ಲಿ ತನ್ನ ಬಗ್ಗೆ ಡೊಮ್ ಹೇಳಿಕೊಂಡಿದ್ದಾನೆ. ತಾನು ತಿಂಗಳಿಗೆ £ 1,300 (ಅಂದಾಜು ರೂ. 1.1 ಲಕ್ಷ) ಬಾಡಿಗೆ ಹಣವನ್ನು ಪಡೆಯುತ್ತಿದ್ದರೂ ತಾನು ನಿರಾಶ್ರಿತ ಎಂದು ಆತ ಹೇಳಿಕೊಂಡಿದ್ದಾನೆ.
ಇಷ್ಟೊಂದು ಮನೆಯ ಮಾಲೀಕನಾದರೂ ದಿನವೂ ಈತ ಭಿಕ್ಷೆ ಬೇಡುತ್ತಾನೆ. ಭಿಕ್ಷೆ ಬೇಡುವ ಮೂಲಕ ಪ್ರತಿದಿನ £ 200-300 (ಅಂದಾಜು ರೂ. 16 ರಿಂದ 25 ಸಾವಿರ) ಗಳಿಸುತ್ತಾನಂತೆ !
ಇಷ್ಟು ಹಣ ಆತನಿಗೆ ಡ್ರಗ್ಸ್‌ಗೆ ಬೇಕಂತೆ. ವ್ಯಸನದ ಸಮಸ್ಯೆಯು ಹದಿಹರೆಯದಲ್ಲಿ ಪ್ರಾರಂಭವಾಯಿತು. ಇದನ್ನು ಬಿಡಲು ಆಗುತ್ತಿಲ್ಲ. 13 ವರ್ಷದವನಾಗಿದ್ದಾಗ ಧೂಮಪಾನ ಮಾಡಲು ಪ್ರಾರಂಭಿಸಿದ್ದು, ಅದನ್ನು ಬಿಡಲು ಆಗುತ್ತಿಲ್ಲ. ಇದು ತಪ್ಪು ಎಂದು ತಿಳಿದಿದ್ದರೂ ಈಗ ಎಲ್ಲವೂ ಕೈ ಮೀರಿದೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದು, ಇದರ ವಿಡಿಯೋ ವೈರಲ್ ಆಗಿದೆ.