ಲಂಡನ್: ಬ್ರಿಟನ್ ನಲ್ಲಿ ಕೊರೋನಾ ಹೊಸ ವೈರಸ್ ಆತಂಕ ಮೂಡಿಸಿದೆ. ಸುಮಾರು 1000 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ದೃಢೀಕರಣ ನೀಡಲಾಗಿದೆ. ಬ್ರಿಟನ್ ಸರ್ಕಾರ ಹೈ ಅಲರ್ಟ್ ಘೋಷಿಸಿದೆ.
ಕೊರೋನಾ ವೈರಸ್ ಹೊಸ ಮಾದರಿ ವೇಗವಾಗಿ ಹಬ್ಬುತ್ತಿದೆ. ಬ್ರಿಟನ್ ವಿಜ್ಞಾನಿಗಳು ಅಧ್ಯಯನ ಕೈಗೊಂಡಿದ್ದಾರೆ ಎಂದು ಆರೋಗ್ಯ ಸಚಿವ ಮ್ಯಾಟ್ ಹ್ಯಾಂಕಾಕ್ ಮಾಹಿತಿ ನೀಡಿದ್ದಾರೆ. ಇಂಗ್ಲೆಂಡ್ ನಲ್ಲಿ ಹೊಸ ಕೊರೋನಾ ಸೋಂಕು ಪತ್ತೆಯಾಗಿ ವೇಗವಾಗಿ ಹಬ್ಬುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿ ತಜ್ಞ ಮೈಕ್ ರ್ಯಾನ್ ಜಿನೇವಾದಲ್ಲಿ ಮಾಹಿತಿ ನೀಡಿದ್ದಾರೆ.
ಈ ಹೊಸ ವೈರಸ್ ತಡೆಯುಲು ಕೊರೋನಾ ಲಸಿಕೆ ಪರಿಣಾಮಕಾರಿಯಾಗಿದೆಯೇ ಎಂದು ಪರೀಕ್ಷೆ ಕೈಗೊಳ್ಳಲಾಗಿದೆ. ಒಂದು ವಾರದ ಅವಧಿಯಲ್ಲಿ ಬ್ರಿಟನ್ ನಲ್ಲಿ ಸೋಂಕು ವೇಗವಾಗಿ ಹಬ್ಬುತ್ತಿದೆ. ಸ್ವ್ಯಾಬ್ ಪರೀಕ್ಷೆಯ ಮೂಲಕ ಹೊಸ ಕೊರೋನಾ ಸೋಂಕು ಪತ್ತೆ ಹಚ್ಚಬಹುದಾಗಿದೆ. ಸೋಮಕು ತಡೆಗೆ ಪರಿಣಾಮಕಾರಿ ಕ್ರಮಕೈಗೊಳ್ಳಲಾಗಿದೆ.