ಲಂಡನ್: ನೀವು ಸಂಚಾರ ಮಾಡುವಾಗ ಯಾರಾದರೂ ಪ್ಯಾಂಟ್ ಧರಿಸದೇ ಬಂದರೆ ಹೇಗಿರುತ್ತದೆ? ಅದಲ್ಲಿಯೂ ವಾಹನಗಳಲ್ಲಿ ಸಂಚಾರ ಮಾಡುವಾಗ ನಿಮ್ಮ ಮುಂದೆ ಪ್ಯಾಂಟ್ರಹಿತ ವ್ಯಕ್ತಿ ಇದ್ದರೆ ಹೇಗೆ ಅನ್ನಿಸುತ್ತದೆ? ಆದರೆ ನೀವು ಲಂಡನ್ಗೆ ಹೋದರೆ ಇಂಥ ಸನ್ನಿವೇಶ ನೋಡಬಹುದು.
ಹೌದು. ಅಚ್ಚರಿ ಎನಿಸುವ ದಿನವೊಂದು ಲಂಡನ್ನಲ್ಲಿ ಚಾಲ್ತಿಯಲ್ಲಿ ಬಂದಿದೆ. ಅದೇನೆಂದರೆ ಒಂದು ದಿನ ಪ್ಯಾಂಟ್ ರಹಿತ ದಿನ ಎಂದು ಆಚರಿಸಲಾಗಿದೆ. ಜನರು ಪ್ಯಾಂಟ್ ಇಲ್ಲದೇ ಒಳ ಉಡುಪಿನಲ್ಲಿ ಲಂಡನ್ನ ಬೀದಿಗಳಲ್ಲಿ ಮತ್ತು ವಾಹನಗಳಲ್ಲಿ ಸಂಚರಿಸಿದ್ದಾರೆ. ಇದರ ಫೋಟೋ ವೈರಲ್ ಆಗಿದೆ.
ಜನವರಿ 8ನ್ನು ‘ನೋ ಟ್ರೌಸರ್ಸ್ ಟ್ಯೂಬ್ ರೈಡ್ ಡೇ’ ಎಂದು ಲಂಡನ್ನಲ್ಲಿ ಆಚರಿಸಲಾಗುತ್ತದೆ, ಅಂದರೆ ಇದು ಪ್ಯಾಂಟ್ ರಹಿತ ದಿನ. ಕೋವಿಡ್ ನಂತರ ಈ ವರ್ಷ ಇದನ್ನು ಆಚರಿಸಲಾಗಿದೆ. ಮೆಟ್ರೋದ ಮಾರ್ಗ ಒಂದರಲ್ಲಿ ಸಂಚರಿಸುವವರಿಗೆ ಪ್ಯಾಂಟ್ ಹಾಕದಂತೆ ಹೇಳಲಾಗಿತ್ತು. ಆದ್ದರಿಂದ ಪ್ರಯಾಣಿಕರು ಹೀಗೆಯೇ ಬಂದಿದ್ದಾರೆ. ಗೊತ್ತಿಲ್ಲದವವರು ತಬ್ಬಿಬ್ಬಾಗಿದ್ದಾರೆ.