ಉಡುಪಿ: ನಿವೃತ್ತ ಶಿಕ್ಷಕರೊಬ್ಬರಿಗೆ ಪಿಂಚಣಿ ಹಣ ಬಿಡುಗಡೆಗೊಳಿಸಲು ಲಂಚ ಪಡೆಯುತ್ತಿದ್ದ ಉಡುಪಿ ಖಜಾನೆಯ ಉಪನಿರ್ದೇಶಕ ಮತ್ತು ಸಹಾಯಕನನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ನಿವೃತ್ತ ಶಿಕ್ಷಕ ಹಿತೇಂದ್ರ ಭಂಡಾರಿ ತಮ್ಮ ಪಿಂಚಣಿ ಹಣ ಪಡೆಯಲು ಕಳೆದ ಐದು ತಿಂಗಳಿಂದ ಖಜಾನೆಯ ಉಪನಿರ್ದೇಶಕ ರವಿಕುಮಾರ್ ಮತ್ತು ಸಹಾಯಕ ರಾಘವೇಂದ್ರ ಎಂಬುವರು ಸತಾಯಿಸುತ್ತಿದ್ದು, 5,000 ರೂ. ಲಂಚ ನೀಡುವಂತೆ ಒತ್ತಾಯಿಸಿದ್ದರು ಎಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು.
ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್, ನಿರೀಕ್ಷಕರಾದ ಸುರೇಶ್, ಕೆ.ಎನ್. ಚಂದ್ರಶೇಖರ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದ್ದು, ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ರವಿಕುಮಾರ್ ಮತ್ತು ರಾಘವೇಂದ್ರ ಅವರನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಚರಣೆಯಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ನಾಗರಾಜ್, ಸತೀಶ್, ಪ್ರಸನ್ನ, ರಮೇಶ್, ರಾಘವೇಂದ್ರ, ಪುಷ್ಪಲತಾ, ಮಲ್ಲಿಕಾ ಅವರು ಭಾಗವಹಿಸಿದ್ದರು.