ಬೆಂಗಳೂರು: ಗಡುವು ಮುಗಿದರೂ ಆಸ್ತಿ ವಿವರ ಪ್ರಕಟಿಸದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಹೆಸರನ್ನು ಲೋಕಾಯುಕ್ತ ಪ್ರಕಟಿಸಿದೆ.
ಜೂನ್ 30ರ ಒಳಗಾಗಿ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸುವಂತೆ ಶಾಸಕರಿಗೆ ಹಾಗೂ ಪರಿಷತ್ ಸದಸ್ಯರಿಗೆ ಸೂಚಿಸಲಾಗಿತ್ತು. ಗಡುವು ಮುಗಿದರೂ ಈವರೆಗೂ ಹಲವು ಶಾಸಕರು ಹಾಗೂ ಪರಿಷತ್ ಸದಸ್ಯರು ಆಸ್ತಿ ವಿವರ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ತಕ್ಷಣ ಆಸ್ತಿ ವಿವರ ಸಲ್ಲಿಸುವಂತೆ ಸೂಚಿಸಿದ್ದು, ಆಸ್ತಿ ವಿವರ ಸಲ್ಲಿಸದ ಶಾಸಕರು ಹಾಗೂ ಸದಸ್ಯರ ಹೆಸರನ್ನು ಪ್ರಕಟಿಸಿದೆ.
ಸಚಿವರಾದ ಕೆ.ಎನ್.ರಾಜಣ್ಣ, ರಾಮಲಿಂಗಾ ರೆಡ್ಡಿ, ಜಮೀರ್ ಅಹ್ಮದ್, ಕೆ.ಹೆಚ್.ಮುನಿಯಪ್ಪ, ರಹೀಮ್ ಖಾನ್ ಸೇರಿದಂತೆ 51 ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ. 21 ಪರಿಷತ್ ಸದಸ್ಯರು ಆಸ್ತಿ ವಿವರ ಸಲ್ಲಿಸಿಲ್ಲ. ಕಳೆದ ವಿಧಾನಸಭೆಯ ಅವಧಿಯಲ್ಲಿ ಸಚಿವರಾಗಿದ್ದ ಬಿ.ಶ್ರೀರಾಮುಲು, ನಾರಾಯಣಗೌಡ, ಎಸ್.ಅಂಗಾರ ಸೇರಿದಂತೆ 81 ಶಾಸಕರು ವಿವರ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ.
ಆಯ್ಕೆಯಾದ ಮೂರು ತಿಂಗಳ ಒಳಗಾಗಿ ಸದಸ್ಯರು ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕು ಎಂಬ ನಿಯಮವಿದೆ. ಆದರೆ ಗಡುವು ಮುಗಿದರೂ ಆಸ್ತಿವಿವರ ಸಲ್ಲಿಸದ ಕಾರಣಕ್ಕೆ ಹೆಸರನ್ನು ಪ್ರಕಟಿಸಲಾಗಿದೆ.