ಚಿಕ್ಕಮಗಳೂರು: ಇ- ಸ್ವತ್ತು ಮಾಡಿಕೊಡಲು ಲಂಚ ಪಡೆಯುತ್ತಿದ್ದ ನಗರಸಭೆ ಬಿಲ್ ಕಲೆಕ್ಟರ್ ಪ್ರದೀಪ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಗರಸಭೆ ವಾರ್ಡ್ 2ರ ಬಿಲ್ ಕಲೆಕ್ಟರ್ ಆಗಿ ಪ್ರದೀಪ್ ಕಾರ್ಯನಿರ್ವಹಿಸುತ್ತಿದ್ದು, ಬೈಪಾಸ್ ರಸ್ತೆಯ ಸದಾಶಿವಮೂರ್ತಿ ಅವರ ಜಾಗದ ಇ- ಸ್ವತ್ತು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನಲ್ಲಿ 3000 ರೂ.ಗಳನ್ನು ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದರು. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಸದಾಶಿವಮೂರ್ತಿ ಅವರ ಪುತ್ರ ರಾಕೇಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.
ಶನಿವಾರ ಪ್ರದೀಪ್ 2000 ರೂಪಾಯಿ ಲಂಚ ಪಡೆಯುವಾಗ ದಾಳಿ ಮಾಡಿ ಬಂಧಿಸಲಾಗಿದೆ. ಲೋಕಾಯುಕ್ತ ಇನ್ ಸ್ಪೆಕ್ಟರ್ ಅನಿಲ್ ರಾಥೋಡ್, ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಲೋಕಾಯುಕ್ತ ಪೊಲೀಸರಾದ ಅನಿಲ್ ನಾಯಕ್, ಲೋಕೇಶ್, ವಿಜಯ ಭಾಸ್ಕರ್, ಶ್ರೀಧರ ಪ್ರಸಾದ್, ಚಂದನ್ ಭಾಗವಹಿಸಿದ್ದರು.