ಬಾಗಲಕೋಟೆ : ಕಚೇರಿಯಲ್ಲಿ 15 ಸಾವಿರ ಲಂಚ ಪಡೆಯುತ್ತಿದ್ದ ಸರ್ವೇಯರ್ ಒಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸರ್ವೇಯರ್ ಮಹಾಂತೇಶ್ ಕವಳಿಕಟ್ಟಿ, ಅಣ್ಣೇಶಿ ಲಮಾಣಿ ಎಂಬುವವರಿಂದ 15 ಸಾವಿರ ಹಣ ಪಡೆಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಮೀನಿನ ಪಿಟಿ ಶೀಟ್ ಮಾಡಿ ಕೊಡಲು ಸರ್ವೇಯರ್ ಲಂಚ ಕೇಳಿದ್ದನು , ಅಲ್ಲದೇ ಈ ಹಿಂದೆ 28 ಸಾವಿರ ರೂ. ಹಣ ಪಡೆದಿದ್ದನು. ಮತ್ತೆ ಈತ 38 ಸಾವಿರ ರೂ ಹಣಕ್ಕೆ ಬೇಡಿಕೆಯಟ್ಟಿದ್ದನು. ಅಂತೆಯೇ 15 ಸಾವಿರ ಹಣ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ.