ಮೈಸೂರು: ಲಂಚ ಪಡೆಯುತ್ತಿದ್ದ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮೈಸೂರು ಜಿಲ್ಲೆ ಸರಗೂರು ತಾಲೂಕಿನ ತಳಲು ಗ್ರಾಮ ಪಂಚಾಯಿತಿ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ತಳಲು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ದಾಳಿ ವೇಳೆ ಲಂಚ ಪಡೆಯತ್ತಿದ್ದ ಪಿಡಿಒ ಶಿಲ್ಪಾ, ಸರ್ವೆಯರ್ ಬಾಲಾಜಿ ಹಾಗೂ ಡಾಟಾ ಎಂಟ್ರಿ ಆಪರೇಟರ್ ಶಿವಲಿಂಗ ಪ್ರಸಾದ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ಸರಗೂರು ತಾಲೂಕಿನ ಚೆನ್ನಾಗುಂಡಿ ಗ್ರಾಮದ ನಿವಾಸಿ ಲಿಂಗರಾಜು ಅವರಿಗೆ ಇ ಖಾತಾ ಮಾಡಿಕೊಡಲು ಲಂಚಕ್ಕೆ ಈ ಮೂವರು ಬೇಡಿಕೆ ಇಟ್ಟಿದ್ದರು. ಶಿಲ್ಪಾಗೆ 8 ಸಾವಿರ ರೂ., ಬಾಲಾಜಿಗೆ 2 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಿಡಿಒ ಸೇರಿ ಮೂವರನ್ನು ಲೋಕ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.