ಬೆಂಗಳೂರು: ಮೂರು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಬೆಸ್ಕಾಂ ಇಂಜಿನಿಯರ್ ಸೇರಿದಂತೆ ಇಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬಸವನಗರದ ಬೆಸ್ಕಾಂ ಎಇ ಯೋಗರಾಜ್ ಮತ್ತು ಚಾಲಕ ಮುರಳಿ ಲೋಕಾಯುಕ್ತ ಬಲಗೆ ಬಿದ್ದವರು. ಗುತ್ತಿಗೆದಾರ ಮಧು ಗೌಡ ಅವರಿಂದ ಹೊಸ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಲು ಮೂರು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಬೆಸ್ಕಾಂ ಕಚೇರಿಯಲ್ಲಿ ಯೋಗರಾಜ್ ಸೂಚನೆ ಮೇರೆಗೆ ಚಾಲಕ ಮುರಳಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಲಂಚದ ಹಣದ ಸಹಿತ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.