
ಮೇಳಕುಂದ ಗ್ರಾಮದ ಆಡಳಿತಾಧಿಕಾರಿ ಹಗೂ ಗ್ರಾಮ ಸೇವಕ 20 ಸಾವಿರ ರೂಪಾಯಿ ಲಂಚಕ್ಕೆ ಕೈಯೊಡ್ಡಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.
ವಿಎ ಕಾಂತೇಶ್ ಹಾಗೂ ಗ್ರಾಮ ಸೇವಕ ಅಖ್ತರ್ ಪಟೇಲ್ ಲೋಕಾಯುಕ್ತ ಬಲೆಗೆ ಬಿದ್ದವರು. ಸಿದ್ದರಾಮಯ್ಯ ಹಿರೇಮಠ ಎಂಬುವವರು ನೀಡಿದ ದೂರಿನ ಮೇರೆಗೆ ಕಲಬುರಗಿ ಲೋಕಾಯುಕ್ತ ಎಸ್ ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಸಿದ್ದರಾಮಯ್ಯ ಹಿರೇಮಠ ಬಳಿ ಕಾಂತೇಶ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 20 ಸಾವಿರ ರೂಪಾಯಿ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿ ನಡೆದಿದೆ.