alex Certify ಅರಮನೆ ಮಂಡಳಿಯಲ್ಲಿ ಅವ್ಯವಹಾರ: ಲೆಕ್ಕಕ್ಕೆ ಸಿಗದ 4 ಲಕ್ಷ ರೂ. ಜಪ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಮನೆ ಮಂಡಳಿಯಲ್ಲಿ ಅವ್ಯವಹಾರ: ಲೆಕ್ಕಕ್ಕೆ ಸಿಗದ 4 ಲಕ್ಷ ರೂ. ಜಪ್ತಿ

ಮೈಸೂರು: ಮೈಸೂರಿನ ಅರಮನೆ ಮಂಡಳಿ ಕಚೇರಿಯಲ್ಲಿ ಲೋಕಾಯುಕ್ತ ದಾಳಿ ನಡೆಸಲಾಗಿದ್ದು, ಲೆಕ್ಕಕ್ಕೆ ಸಿಗದ 4.10 ರೂಪಾಯಿಯನ್ನು ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ.

ಪ್ರವೇಶ ದ್ವಾರ, ಪಾರ್ಕಿಂಗ್ ಲಾಟ್ ನಲ್ಲಿ ಲೆಕ್ಕಕ್ಕೆ ಸಿಗದ ಹಣ ಪತ್ತೆಯಾಗಿದೆ. ಪ್ರವೇಶ ಟಿಕೆಟ್, ಪಾರ್ಕಿಂಗ್ ನಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ ಎಂಬ ದೂರುಗಳ ಆಧರಿಸಿ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಗುರುವಾರ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ಪಾರ್ಕಿಂಗ್, ಟಿಕೇಟ್ ಕೌಂಟರ್ ನಲ್ಲಿ ಅವ್ಯವಹಾರ ನಡೆಯುತ್ತಿರುವುದು ಪತ್ತೆಯಾಗಿದ್ದು, ಲೆಕ್ಕವಿಲ್ಲದ 4.10 ಲಕ್ಷ ನಗದು ಜಪ್ತಿ ಮಾಡಿ ತನಿಖೆ ಮುಂದುವರಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...