alex Certify ಫೋನ್ ಪೇ ಮೂಲಕ 83 ಸಾವಿರ ಪಡೆದು ಮತ್ತೆ 1.50 ಲಕ್ಷ ರೂ. ಲಂಚ ಸ್ವೀಕರಿಸತ್ತಿದ್ದ ಎಇಇ, ಜೆಇ ಲೋಕಾಯುಕ್ತ ಬಲೆಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೋನ್ ಪೇ ಮೂಲಕ 83 ಸಾವಿರ ಪಡೆದು ಮತ್ತೆ 1.50 ಲಕ್ಷ ರೂ. ಲಂಚ ಸ್ವೀಕರಿಸತ್ತಿದ್ದ ಎಇಇ, ಜೆಇ ಲೋಕಾಯುಕ್ತ ಬಲೆಗೆ

ಧಾರವಾಡ: ಲಂಚ ಸ್ವೀಕರಿಸುತ್ತಿದ್ದಾಗಲೇ ಶಿಗ್ಗಾಂವಿ ಏತ ನೀರಾವರಿ ಉಪ ವಿಭಾಗದ ಎಇಇ, ಜೆಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಧಾರವಾಡದಲ್ಲಿರುವ ಶಿಗ್ಗಾಂವಿ ಏತ ನೀರಾವರಿ ಇಲಾಖೆ ಕಚೇರಿಯಲ್ಲಿ 1.50 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಎಇಇ ಬಿ. ಮಂಜುನಾಥ 1 ಲಕ್ಷ ರೂಪಾಯಿ, ಕಿರಿಯ ಇಂಜಿನಿಯರ್ ಪ್ರಕಾಶ ಹೊಸಮನಿ 50 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಬಲೆಗೆ ಬಿದ್ದಿದ್ದಾರೆ.

ರಸ್ತೆ ಕಾಮಗಾರಿ ಬಿಲ್ ಮೊತ್ತ ಬಿಡುಗಡೆ ಮಾಡಲು ಲಂಚ ಸ್ವೀಕರಿಸುವಾಗ ಅವರು ಬಲೆಗೆ ಬಿದ್ದಿದ್ದಾರೆ. ಮೊದಲು ಇಬ್ಬರೂ ಫೋನ್ ಪೇ ಮೂಲಕ 83,000 ರೂ. ಲಂಚ ಪಡೆದುಕೊಂಡಿದ್ದರು. ಇಂದು ಒಂದೂವರೆ ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...