
ಹಾವೇರಿ: ಲಂಚ ಸ್ವೀಕರಿಸುತ್ತಿದ್ದಾಗಲೇ ಉಪ ಖಜಾನೆ ಸಹಾಯಕ ಅಧಿಕಾರಿ ಮತ್ತು ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಒಂದು ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಬಸವರಾಜ ಕಡೆಮನಿ, ಯಲ್ಲಪ್ಪ ಅಮ್ಮಿನಬಾವಿ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಸಹಾಯಕ ಖಜಾನೆ ಅಧಿಕಾರಿ ಮತ್ತು ಎಫ್.ಡಿ.ಎ. ಅವರನ್ನು ಸೆರೆಹಿಡಿಯಲಾಗಿದೆ. ಪಶು ಚಿಕಿತ್ಸಾಲಯ ಬಿಲ್ ಪಾಸ್ ಮಾಡಲು 1,000 ರೂ. ಲಂಚ ಸ್ವೀಕರಿಸುತ್ತಿದ್ದರು. ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.