ಬೆಂಗಳೂರು: ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಒಂದೂವರೆ ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಎನ್. ಮಾರೇಗೌಡ ಸಿಕ್ಕಿಬಿದ್ದವರು.
ಕಟ್ಟಡ ಕಾಮಗಾರಿಗೆ ದಿನೇಶ್ ಎಂಬುವರು ತಾತ್ಕಾಲಿಕ ತಡೆಯಾಜ್ಞೆ ತಂದಿದ್ದರು. ದಿನೇಶ್ ಅವರ ಕಟ್ಟಡ ಕಾಮಗಾರಿಗೆ ಕೋಕಿಲಾ ಮತ್ತು ಲಕ್ಷ್ಮಣ ರೆಡ್ಡಿ ತೊಂದರೆ ನೀಡುತ್ತಿದ್ದರು. ಪೊಲೀಸ್ ರಕ್ಷಣೆ ಕೋರಿ ದಿನೇಶ್ ಪೀಣ್ಯ ಠಾಣೆಗೆ ದೂರು ನೀಡಿದ್ದರು. ರಕ್ಷಣೆ ನೀಡಲು ಮಾರೇಗೌಡ ಮೂರು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇವತ್ತು 1.5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಹೆಡ್ ಕಾನ್ಸ್ಟೇಬಲ್ ಮಾರೇಗೌಡ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.