ಬೆಂಗಳೂರು: ವಾಣಿಜ್ಯ ತೆರಿಗೆ ರಿಯಾಯಿತಿ ನೀಡಲು ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಆರೋಪದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಶೇಖರ್ ಪಾಟೀಲ್ ಬಂಧಿತರು. ವಾಣಿಜ್ಯ ತೆರಿಗೆ ರಿಯಾಯಿತಿ ನೀಡಲು ಪವನ್ ಕುಮಾರ್ ಎಂಬುವವರಿಗೆ 80 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ 50 ಸಾವಿರ ರೂ. ಪಡೆದು ಬಳಿಕ ಆನ್ಲೈನ್ ನಲ್ಲಿ ಪವನ್ ಗೆ 29,500 ರೂಪಾಯಿ ವಾಪಸ್ ನೀಡಿದ್ದರು. ಈ ಸಂಬಂಧ ಪವನ್ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಲಂಚದ ಹಣದ ಸಹಿತ ಆರೋಪಿ ಶೇಖರ್ ಪಾಟೀಲ್ ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.