![](https://kannadadunia.com/wp-content/uploads/2022/11/xlokayuktaa-1660056178.jpg.pagespeed.ic_.avnVMonj-s.jpg)
ಬೆಂಗಳೂರಿನಲ್ಲಿ ಬೆಸ್ಕಾಂ ಅಧಿಕಾರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸಹಾಯಕ ಲೆಕ್ಕಾಧಿಕಾರಿ ನವೀನ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದವರು ಎಂದು ಹೇಳಲಾಗಿದೆ.
ವಿದ್ಯುತ್ ಮೀಟರ್ ಗೆ ಸಂಬಂಧಿಸಿದಂತೆ ಹೆಸರು ಬದಲಿಸಲು 50,000 ರೂ.ಗೆ ಡಿಮ್ಯಾಂಡ್ ಮಾಡಿ 40,000 ಲಂಚ ಸ್ವೀಕರಿಸುತ್ತಿದ್ದರು. ದೀಪಕ್ ಎಂಬುವವರ ಬಳಿ 40,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹಣದ ಸಮೇತ ಅಧಿಕಾರಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.