ಬೆಂಗಳೂರು: ಎಸಿಬಿ ಸ್ಥಾಪನೆಯಾಗಿ ಕಳೆದ ಆರು ವರ್ಷಗಳಿಂದ ನಿಷ್ಕ್ರಿಯವಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು ಹೈಕೋರ್ಟ್ ಆದೇಶದ ಮೇರೆಗೆ ಮತ್ತೆ ಬಲಗೊಳಿಸಲಾಗುವುದು. ಲೋಕಾಯುಕ್ತಕ್ಕೆ ಇನ್ನಷ್ಟು ಬಲ ತುಂಬಲಿದ್ದು, ಸಿಜೆಯಷ್ಟೇ ಅಧಿಕಾರ ನೀಡಲಾಗುವುದು. ಸಂಸ್ಥೆಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗುವುದು.
ಲೋಕಾಯುಕ್ತದಲ್ಲಿ ಖಾಲಿ ಹುದ್ದೆಗಳ ಭರ್ತಿಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಲೋಕಾಯುಕ್ತ ಸಂಸ್ಥೆಗೆ ಈ ಹಿಂದಿನಂತೆಯೇ ಸ್ವಯಂ ಪ್ರೇರಿತ ಕೇಸು ದಾಖಲಿಸಲು ಅಧಿಕಾರ ನೀಡಲಾಗುವುದು. ಲೋಕಾಯುಕ್ತ ಸಂಸ್ಥೆಗೆ ಇನ್ನೊಂದು ರಿಜಿಸ್ಟ್ರಾರ್ ಹುದ್ದೆ ಸೃಷ್ಟಿಸಲಾಗುವುದು. ಲೋಕಾಯುಕ್ತರಿಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಷ್ಟೇ ಅಧಿಕಾರ, ವೇತನ, ಸೌಕರ್ಯ ಕಲ್ಪಿಸಲಾಗುತ್ತದೆ ಎಂದು ಹೇಳಲಾಗಿದೆ.