ಕಲಬುರಗಿ: ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ ಮಾಹಿತಿ ತಿಳಿದ ಆಳಂದ ಬಿಇಒ ಹಣಮಂತ ರಾಥೋಡ ಪರಾರಿಯಾಗಿದ್ದಾರೆ.
ನಿವೃತ್ತ ಶಿಕ್ಷಕರೊಬ್ಬರ ಪಿಂಚಣಿ ಹಣ ಮಂಜೂರು ಮಾಡಲು 50,000 ರೂ. ಲಂಚಕ್ಕೆ ಹಣಮಂತ ಬೇಡಿಕೆ ಇಟ್ಟಿದ್ದರು. ಮಧ್ಯವರ್ತಿ ರಾಧಾಕೃಷ್ಣ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ದಾಳಿಯ ಮಾಹಿತಿ ಪಡೆದ ಬಿಇಒ ಹಣಮಂತ ಪರಾರಿಯಾಗಿದ್ದಾರೆ.
ನಿವೃತ್ತ ಶಿಕ್ಷಕಿಯೊಬ್ಬರ ಪಿಂಚಣಿಗೆ ಸಂಬಂಧಿಸಿದ ಕಡತಗಳಿಗೆ ಸಹಿ ಹಾಕಲು ಬಿಇಒ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಶಿಕ್ಷಕಿಯ ಪತಿ ಯಶವಂತ ಬಿರಾದಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಲೋಕಾಯುಕ್ತ ಡಿವೈಎಸ್ಪಿ ಗೀತಾ ಬೇನಹಾಳ ಮತ್ತು ಪಿಐ ರಾಜಶೇಖರ ಹಳಿಗೋದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಕಾಳಗಿ ತಾಲೂಕಿನ ಕೊಡ್ಲಿ ತಾಂಡಾದ ಶಿಕ್ಷಕ ರಾಧಾಕೃಷ್ಣ ಮಧ್ಯವರ್ತಿಯಾಗಿ ಹಣ ಪಡೆಯುತ್ತಿದ್ದ ವೇಳೆ ದಾಳಿ ಮಾಡಿ ಬಂಧಿಸಲಾಗಿದೆ.