alex Certify BIG NEWS: ಲೋಕಸಭಾ ಚುನಾವಣೆ: ಕೊನೇ ಹಂತದ ಮತದಾನದ ವೇಳೆ ದಾಂಧಲೆ; ಕೊಳಕ್ಕೆ ಇವಿಎಂ ಯಂತ್ರ ಎಸೆದು ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲೋಕಸಭಾ ಚುನಾವಣೆ: ಕೊನೇ ಹಂತದ ಮತದಾನದ ವೇಳೆ ದಾಂಧಲೆ; ಕೊಳಕ್ಕೆ ಇವಿಎಂ ಯಂತ್ರ ಎಸೆದು ಆಕ್ರೋಶ

ಕೋಲ್ಕತ್ತಾ: ಲೋಕಸಭಾ ಚುನಾವಣೆಯ 7ನೇ ಹಂತದ ಹಾಗೂ ಕೊನೇ ಹಂತದ ಮತದಾನ ನಡೆಯುತ್ತಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಪಂಚಾಬ್, ಒಡಿಸಾ, ಹಿಮಾಚಲಪ್ರದೇಶ ಸೇರಿದಂತೆ 57 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಈ ನಡುವೆ ಮತದಾನದ ವೇಳೆ ಪಶ್ಚಿಮ ಬಂಗಾಳದಲ್ಲಿ ಮತಗಟ್ಟೆಗಳಲ್ಲಿ ಹಂಸಾಚಾರ ನಡೆದಿದೆ.

ಪಶ್ಚಿಮ ಬಂಗಾಳದ 9 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಜಾಧವಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಐಎಸ್ ಎಫ್ ಹಾಗೂ ಸಿಪಿಐ(ಎಂ) ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ.

ಭಾಂಗಾರ್ ನ ಸತುಲಿಯಾ ಪ್ರದೇಶದಲ್ಲಿ ಎರಡೂ ಪಕ್ಷಗಳ ಬೆಂಬಲಿಗರ ನಡುವೆ ಗಲಾಟೆ ನಡೆದು, ಹಿಂಸಾಚಾರಕ್ಕೆ ತಿರುಗಿದೆ. ದಕ್ಷಿಣ 24ಪರಗಣ ಪ್ರದೇಶದಲ್ಲಿ ಕಿಡಿಗೇಡಿಗಳು ಮತಗಟ್ಟೆಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದು, ಇವಿಎಂ ಗಳನ್ನು ಹೊತ್ತೊಯ್ದು ಕೊಳಕ್ಕೆ ಎಸೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...