
ಬೆಂಗಳೂರು: ಲೋಕಸಭಾ ಚುನಾವಣೆ ಮತದಾನಕ್ಕೆ ರಾಜ್ಯದಲ್ಲಿ ಕ್ಷಣ ಗಣನೆ ಆರಂಭವಾಗಿದೆ. ವೋಟ್ ಮಾಡಿ ಬಂದವರಿಗೆ ಉಚಿತ ಊಟ ನೀಡಲು ಬೆಂಗಳೂರಿನ ಹೋಟೆಲ್ ಅಸೊಸಿಯೇಷನ್ ಸದಸ್ಯರಿಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ.
ಈ ಬಗ್ಗೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣಾ ಮತದಾನ ನಡೆಯಲಿದೆ. ಅಂದು ಮತದಾನ ಮಾಡಿ ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ತೋರಿಸಿದವರಿಗೆ ಹೋಟೆಲ್ ಗಳಲ್ಲಿ ಉಚಿತವಾದ ಆಹಾರ, ಊಟ ನೀಡಲು ಸೂಚಿಸಲಾಗಿದೆ.
ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರಿನ ಕೆಲವು ಹೋಟೆಲ್ ಗಳು ಕಳೆದ ವರ್ಷ ವಿಧಾನಸಭೆ ಚುನಾವಣೆ ವೇಳೆ ಇದೇ ರೀತಿಯ ಪ್ರಯತ್ನ ಮಡಿದ್ದವು. ಹೋಟೆಲ್ ಗಳ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆರ್ ನಡೆಸಿದ ಹೈಕೋರ್ಟ್, ಅರ್ಜಿದಾರರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಬಾರದು. ಬೆಂಗಳೂರಿನ ಹೋಟೆಲ್ ಗಳು ಮತದಾನದ ಬಳಿಕ ಮತದಾರರಿಗೆ ಉಚಿತ ಊಟ ವಿತರಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.