ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಮತದಾನ ನಡೆಯಲಿದೆ. ಕರ್ನಾಟಕದ ದಕ್ಷಿಣ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಎಲ್ಲರೂ ಮತದಾನ ಮಾಡುವುದು ಕಡ್ಡಾಯ. ಆದರೆ ಖಾಸಗಿ ಕಂಪನಿಗಳಿಗಳಿಗೆ ಕಡ್ಡಾಯ ರಜೆ ಇಲ್ಲ, ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಮತದಾನದ ದಿನ ಏಪ್ರಿಲ್ 26ರಂದು ಬ್ಯಾಂಕ್ ಗಳು, ಶಾಲಾ-ಕಾಲೇಜು, ಕೆಲ ಸರ್ಕಾರಿ ಕಚೇರಿಗಳಿಗೆ ರಜೆ ನೀಡಲಾಗಿದೆ. ಅಗತ್ಯ ಸೇವೆಗಳಾದ ಬಸ್, ರೈಲು, ಆಸ್ಪತ್ರೆ, ಔಷಧಾಲಯಗಳು, ಖಾಸಗಿ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಖಾಸಗಿ ಕಂಪನಿಗಳಿಗೆ ಕಡ್ಡಾಯ ರಜೆ ಇರುವುದಿಲ್ಲ.
ಬ್ಯಾಂಕ್ ಗಳು, ಶಾಲಾ-ಕಾಲೇಜು, ಹೈಕೋರ್ಟ್ ನ್ಯಾಯಪೀಠ, ದ್ಸರ್ಕಾರಿ ಕಚೇರಿಗಳಿಗೆ ರಜೆ ನೀಡಲಾಗಿದೆ.
ಇನ್ನು ಖಾಸಗಿ ಕಂಪನಿ ಉದ್ಯೋಗಿಗಳಿಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ವೋಟ್ ಹಾಕಿ ಕಚೇರಿಗೆ ಬರಬಹುದು. ಮೊದಲ ಪಾಳಿಯಿದ್ದರೆ ಕಚೇರಿ ಕೆಲಸ ಮುಗಿಸಿ ಸಂಜೆ ಮತದಾನ ಮಾಡಬಹುದು.