
ಬೆಂಗಳೂರು: ನಾಳೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಭರ್ಜರಿ ಸಿದ್ಧತೆ ನಡೆಸಿದೆ. ಚುನಾವಣಾ ಕೆಲಸಗಳಿಗಾಗಿ ಬಸ್ ಗಳನ್ನು ಬಳಸಿಕೊಳ್ಳುತ್ತಿರುವುದರಿಂದ ಬಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ದಟ್ಟವಾಗಿದೆ.
ಇಂದು ಹಾಗೂ ನಾಳೆ ಸರ್ಕಾರಿ ಸಾರಿಗೆ, ಖಾಸಗಿ ಸಾರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಚುನಾವಣಾ ಕಾರ್ಯಕ್ಕೆ ಬಸ್ ಬಳಕೆಯಾಗುವುದರಿಂದ ವ್ಯತ್ಯಯವಾಗುವ ಸಾಧ್ಯತೆ ಇದೆ.
ಚುನಾವಣಾ ಕೆಲಕ್ಕೆ ಕೆ ಎಸ್ ಆರ್ ಟಿಸಿ, ಬಿಎಂ ಟಿಸಿ, ಖಾಸಗಿ ಬಸ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ. 2,100 ಕೆ ಎಸ್ ಆರ‍್ ಟಿ ಸಿ ಬಸ್ ಹಾಗೂ 1,700 ಬಿಎಂಟಿಸಿ ಬಸ್ ಗಳನ್ನು ಚುನಾವಣಾ ಆಯೋಗ ಬಳಸಿಕೊಂಡಿದೆ.
ಪ್ರತಿ ವಾಹನಕ್ಕೂ ಪ್ರತ್ಯೇಕ ದರ ನಿಗದಿ ಮಡಲಾಗಿದ್ದು, ಸರ್ಕಾರಿ ಬಸ್ ಗಳಿಗೆ ಕೀ,ಮೀಗೆ 57 ರೂಪಾಯಿಯಂತೆ ದರ ನಿಗದಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಇಂದು ಹಾಗೂ ನಾಳೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ದಟ್ಟವಾಗಿದೆ.