ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯುತ್ತಿದ್ದು, ಮತದಾರರು ಉತ್ಸಾಹದಲ್ಲಿ ಮತಗಟ್ಟಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ರಾಜ್ಯದ 14 ಕ್ಷೇತ್ರಗಳಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.41.59ರಷ್ಟು ಮತದಾನವಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾನವಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ
ಚಿಕ್ಕೋಡಿ ಕ್ಷೇತ್ರದಲ್ಲಿ ಶೇ.45ರಷ್ಟು ಮತದಾನವಾಗಿದೆ.
ಬೆಳಗಾವಿ ಕ್ಷೇತ್ರ ಶೇ.40.57ರಷ್ಟು
ಉತ್ತರ ಕನ್ನಡ ಶೇ.44.22ರಷ್ಟು
ಬಳ್ಳಾರಿ ಕ್ಷೇತ್ರ ಶೇ.44.36ರಷ್ಟು
ದಾವಣಗೆರೆ ಕ್ಷೇತ್ರ ಶೇ.42.32ರಷ್ಟು
ಶಿವಮೊಗ್ಗ ಕ್ಷೇತ್ರ ಶೇ.44.98ರಷ್ಟು
ರಾಯಚೂರು ಕ್ಷೇತ್ರ ಶೇ.35.33ರಷ್ಟು
ಬಾಗಲಕೋಟೆ ಶೇ.32.80ರಷ್ಟು
ವಿಜಯಪುರ ಶೇ.40.18ರಷ್ಟು
ಕಲಬುರ್ಗಿ ಶೇ.37.48ರಷ್ಟು
ಕೊಪ್ಪಳ ಶೇ.42.74ರಷ್ಟು ಮತದಾನವಾಗಿದೆ.