ಹುಬ್ಬಳ್ಳಿ/ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 2ನೇ ಹಂತದ ಮತದಾನ ನಡೆಯುತ್ತಿದ್ದು, ಮತದಾರರು ಉತ್ಸಾಹದಲ್ಲಿ ಮತಗಟ್ಟಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಒಂದು ವೋಟು ಚಲಾವಣೆಗಾಗಿ ವಿದೇಶದಿಂದ ಆಗಮಿಸಿ ವಿದ್ಯಾರ್ಥಿನಿಯಿಬ್ಬರು ತಮ್ಮ ಹಕ್ಕು ಚಲಾಯಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ ಮೂಲದ ರುಚಿತಾ ಎಂಬ ಯುವತಿ ಚುನಾವಣೆಗಾಗಿ ಅಮೆರಿಕಾದಿಂದ ಆಗಮಿಸಿದ್ದು, ಮೊದಲ ಬಾರಿ ಮತದಾನ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಹುಬ್ಬಳ್ಳಿಯ ವಿಜಯನಗರದ ನಿವಾಸಿ ವಿದ್ಯಾರ್ಥಿನಿ ರುಚಿತಾ ಬೂತ್ ಸಂಖ್ಯೆ 75ರಲ್ಲಿ ಮತಚಲಾಯಿಸಿ ಮೊದಲ ಸಲ ವೋಟ್ ಮಾಡುವ ಮುಲಕ ಮತದಾನದ ಮಹತ್ವ ಸಾರಿದರು.
ಇದೇ ವೇಳೆ ಕುಂದಾನಗರಿ ಬೆಳಗಾವಿಯಲ್ಲಿ ಅಬುದಾಬಿಯಿಂದ ಬಂದು ಯುವಕ ಸೂರಜ್ ಉಪಾಶೆ ಮತದಾನ ಮಾಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆಂದೇ ಅಬುದಾಬಿಯಿಂದ ಬೆಳಗಾವಿಗೆ ಆಗಮಿಸಿದ ಸೂರಜ್, ಹುಕ್ಕೇರಿಯ ಗಾಂಧಿನಗರ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಇದೇ ವೇಳೆ ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದರು.