ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದ್ದು, ರಾಜ್ಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಿವಾಸಿಗಳ ಗನ್, ಬಂದೂಕು, ಶಸ್ತ್ರಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಲಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಬೆಂಗಳೂರಿನಲ್ಲಿ ಲೈಸನ್ಸ್ ಇರುವ ಗನ್, ಶಸ್ತ್ರಗಳನ್ನು ಹೊಂದಿರುವ ನಾಗರಿಕರು ಆಯಾ ಪೊಲೀಸ್ ಠಾಣೆಗಳಿಗೆ ತಂದು ಒಪ್ಪಿಸುವಂತೆ ಸೂಚಿಸಲಾಗಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಈ ಬಗ್ಗೆ ಮಾತನಾಡಿದ್ದು, ನಮ್ಮ ರಾಜ್ಯದ ಸುತ್ತ 6 ರಾಜ್ಯಗಳ ಗಡಿ ಇದೆ ಈ ನಿಟ್ತಿನಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದ್ದು, 29 ಜಿಲ್ಲೆಗಳ ಜೊತೆ ಬಾರ್ಡರ್ ಗಳು ಬರಲಿವೆ. ಎಲ್ಲೆಡೆ ಚೆಕ್ ಪಾಯಿಂಟ್ಸ್, ಕಳೆದ 6 ತಿಂಗಳಿಂದ ವಿಜಿಲೆನ್ಸ್ ಆರಂಭಿಸಲಾಗಿದೆ. 532 ಕೋಟಿ ಹಣ ಸೀಜ್ ಮಾಡಲಾಗಿದೆ. 42 ಕೋಟಿ ರೂ ಲಿಕ್ಕರ್, 26 ಕೋಟಿ ಮೌಲ್ಯದ ಡ್ರಗ್ಸ್, 71 ಕೋಟಿ ಮೌಲ್ಯದ ಚಿನ್ನ ಸೀಜ್ ಮಾಡಲಾಗಿದೆ ಎಂದು ವಿವರಿಸಿದರು.