
ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೆಣ್ಣು ಕೊಟ್ಟಿದ್ದ ಅತ್ತೆಯೇ ಅಳಿಯನನ್ನು ಬರ್ಬರವಾಗಿ ಕೊಲೆ ಮಾಡಿರುವ ರಹಸ್ಯ ಬಯಲಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ ಮಾರ್ಚ್ 22ರಂದು ಬಿಜಿಎಸ್ ಲೇಔಟ್ ನ ನಿರ್ಮಾಣ ಹಂತದ ಕಟ್ಟಡಲ್ಲಿ ಕೊಲೆಯಾಗಿದ್ದರು. ಘಟನೆ ವೇಳೆ ಗನ್ ಮ್ಯಾನ್ ನಾಪತ್ತೆಯಾಗಿದ್ದು, ಆ ಬಳಿಕ ಪೊಲೀಸ್ ಠಾಣೆಯಲ್ಲಿ ಪತ್ತೆಯಾಗಿದ್ದ ಎನ್ನಲಾಗಿತ್ತು. ಇದೀಗ ಈ ಪ್ರಕರಣಕ್ಕೆ ವಿಚಿತ್ರ ತಿರುವು ಸಿಕ್ಕಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಗೆ ಹಳೇ ವೈರಿಗಳೋ ಅಥವಾ ರೌಡಿಗಳೋ ಹತ್ಯೆ ಮಾಡಿದ್ದಲ್ಲ, ಪತ್ನಿಯ ತಾಯಿಯೇ ಕೊಲೆಗೈದಿರುವುದು ಬೆಳಕಿಗೆ ಬಂದಿದೆ. ಉದ್ಯಮಿ ಲೋಕನಾಥ್ ಸಿಂಗ್ ರಿಯಲ್ ಎಸೇಟ್ ಉದ್ಯಮಿಯೊಬ್ಬರ ಮಗಳಿಗೆ ಬ್ಲ್ಯಾಕ್ ಮೇಲ್ ಮಾಡಿ ಬೆದರಿಸಿ ಮದುವೆಯಾಗಿದ್ದನಂತೆ. ಇದರಿಂದ ಮಗಳ ಭವಿಷ್ಯ, ಮರ್ಯಾದೆ ಪ್ರಶ್ನೆ ಎಂದು ಹೆದರಿ ತಂದೆ-ತಾಯಿ ಮಗಳನ್ನು ಅನಿವಾರ್ಯವಾಗಿ ಲೋನಾಥ್ ಗೆ ಕೊಟ್ಟು ವಿವಾಹ ಮಾಡಿದ್ದರಂತೆ. ಲೋಕನಾಥ್ ಸಿಂಗ್ ನಿಂದ ಸಾಕಷ್ಟು ನೊಂದಿದ್ದ ಪತ್ನಿ ಹಾಗೂ ಆಕೆಯ ತಂದೆ-ತಾಯಿ ಈತನಿಗೆ ಏನಾದರೂ ಒಂದು ಗತಿ ಕಾಣಿಸಬೇಕು ಎಂದು ಯೋಚಿಸಿದ್ದಗಲೇ ಸಂದರ್ಭ ಸಿಕ್ಕಿತ್ತು.
ಅಂದು ಬಿಜಿಎಸ್ ಲೇಔಟ್ ಗೆ ಅಳಿಯ ಹಾಗೂ ಮಗಳ ಜೊತೆ ತಾಯಿ ಬಂದಿದ್ದಳು. ನಿರ್ಮಾಣ ಹಂತದ ಕಟ್ಟಡದಲ್ಲಿ ರಾತ್ರಿ ಪತಿ-ಪತ್ನಿ ಭರ್ಜರಿ ಪಾರ್ಟಿ ಮಾಡಿದ್ದರು. ಅದಾಗಲೇ ಕುಡಿದು ಟೈಟ್ ಆಗಿದ್ದ ಲೋಕನಾಥ್ ನನ್ನು ಗಮನಿಸಿದ ಪತ್ನಿ, ಗನ್ ಮ್ಯಾನ್ ಬಳಿ ಏನನ್ನೋ ತರಲೆಂದು ಹೊರ ಕಳುಹಿದ್ದಳಂತೆ. ನಿರ್ಮಾಣ ಹಂತದ ಕಟ್ಟಡದಲ್ಲೇ ಪಾರ್ಟಿ ಬಳಿಕ ಊಟವನ್ನೂ ಮಾಡಿದ್ದರಂತೆ. ಕುಡಿದ ಮತ್ತಿನಲ್ಲಿದ್ದ ಅಳಿಯನಿಗೆ ಊಟದಲ್ಲಿ ಅತ್ತೆ ನಿದ್ರೆ ಮಾತ್ರೆ ಬೆರೆಸಿಕೊಟ್ಟಿದ್ದಾಳೆ. ಕಟ್ಟಡದಲ್ಲೇ ಅಳಿಯ ನಿದ್ರೆಗೆ ಜಾರಿದ್ದಾನೆ. ಆತ ನಿದ್ದೆಗೆ ಜಾರುತ್ತಿದ್ದಂತೆ ಹರಿತವಾದ ಆಯುಧದಿಂದ ಅತ್ತೆ ಆತನ ಕತ್ತು ಕುಯ್ದುದಿದ್ದಾಳೆ. ರಕ್ತದ ಮಡುವಲ್ಲೇ ಲೋಕನಾಥ್ ಪ್ರಾಣ ಬಿಟ್ಟಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಠಾಣೆ ಪೊಲೀಸರು ಅಮ್ಮ-ಮಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.