ನವದೆಹಲಿ: ಕೆಲವು ಕಿಡಿಗೇಡಿಗಳು ತಮ್ಮ ಹೆಸರಿನಲ್ಲಿ ಪ್ರೊಫೈಲ್ ಫೋಟೋದೊಂದಿಗೆ ನಕಲಿ ಖಾತೆಯನ್ನು ರಚಿಸಿದ್ದಾರೆ. ಈ ಮೂಲಕ ಸಂಸದರು ಮತ್ತು ಇತರರಿಗೆ ಕೆಲವು ಸಂಖ್ಯೆಗಳಿಂದ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮಾಹಿತಿ ನೀಡಿದ್ದಾರೆ.
ತಮ್ಮ ಹೆಸರಿನ ಖಾತೆಯಿಂದ ಬರುವ ಕರೆಗಳು ಮತ್ತು ಸಂದೇಶಗಳನ್ನು ನಿರ್ಲಕ್ಷಿಸಿ ಮತ್ತು ಅವರ ಕಚೇರಿಗೆ ತಿಳಿಸುವಂತೆ ಅವರು ತಿಳಿಸಿದ್ದಾರೆ.
ಕೆಲವು ಕಿಡಿಗೇಡಿಗಳು ನನ್ನ ಹೆಸರಿನಲ್ಲಿ ಪ್ರೊಫೈಲ್ ಫೋಟೋದೊಂದಿಗೆ ನಕಲಿ ಖಾತೆಯನ್ನು ರಚಿಸಿದ್ದಾರೆ. 7862092008, 9480918183 & 9439073870 ಈ ಸಂಖ್ಯೆಗಳಿಂದ ಸಂದೇಶಗಳನ್ನು ಕಳುಹಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ. ದಯವಿಟ್ಟು ಈ ಮತ್ತು ಇತರ ಸಂಖ್ಯೆಗಳಿಂದ ಕರೆಗಳು/ಸಂದೇಶಗಳನ್ನು ನಿರ್ಲಕ್ಷಿಸಿ ಮತ್ತು ನನ್ನ ಕಚೇರಿಗೆ ತಿಳಿಸಿ ಎಂದು ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.