ನವದೆಹಲಿ: ಸೋಮವಾರ ನಡೆದ ಲೋಕಸಭೆ ಚುನಾವಣೆ ಐದನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಒಟ್ಟಾರೆ ಶೇಕಡ 58 ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಜಮ್ಮು ಮತ್ತು ಕಾಶ್ಮೀರ ಸೇರಿ ಆರು ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ ನಡೆದಿತ್ತು. ಕಳೆದ ನಾಲ್ಕು ಹಂತಗಳಿಗೆ ಹೋಲಿಸಿದರೆ ಐದನೇ ಹಂತದಲ್ಲಿ ಮತದಾನ ಅತ್ಯಂತ ನೀರಸವಾಗಿದೆ. ಪಶ್ಚಿಮ ಬಂಗಾಳ ಶೇಕಡ 73, ಮಹಾರಾಷ್ಟ್ರ ಶೇಕಡ 50ರಷ್ಟು ಮತದಾನವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶೇಕಡ 55ರಷ್ಟು ನಾಗರೀಕರು ಮತ ಚಲಾಯಿಸಿದ್ದಾರೆ.
ಬಿಹಾರದಲ್ಲಿ ಶೇಕಡ 53, ಜಾರ್ಖಂಡ್ ನಲ್ಲಿ ಶೇಕಡ 63, ಲಡಾಕ್ ನಲ್ಲಿ ಶೇಕಡ 67, ಒಡಿಶಾದಲ್ಲಿ ಶೇಕಡ 61, ಉತ್ತರ ಪ್ರದೇಶದಲ್ಲಿ ಶೇಕಡ 58 ರಷ್ಟು ಮತದಾನವಾಗಿದೆ. ಐದನೇ ಹಂತದಲ್ಲಿ 49 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.