ಬೆಂಗಳೂರು: ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣೆ ಅಕ್ರಮಗಳು ಹೆಚ್ಚಾಗಿ ನಡೆಯುತ್ತಿವೆ. ರಾಜ್ಯದ ವಿವಿಧೆಡೆ ಒಂದೇ ದಿನ 36 ಕೋಟಿ ರೂಪಾಯಿ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ.
ಚುನಾವಣೆ ಘೋಷಣೆ ಬಳಿಕ ರಾಜ್ಯದಲ್ಲಿ ದೊಡ್ಡ ಬೇಟೆ ಇದಾಗಿದೆ. 9 ಕೋಟಿ ರೂಪಾಯಿ ನಗದು, 9 ಲಕ್ಷ ರೂಪಾಯಿ ಮೌಲ್ಯದ ವಜ್ರಗಳನ್ನು ಜಪ್ತಿ ಮಾಡಲಾಗಿದೆ. ವಿವಿಧ ತನಿಖಾ ತಂಡಗಳು ಚುನಾವಣಾ ಅಕ್ರಮ ತಡೆಯುವ ನಿಟ್ಟಿನಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿದ್ದು, ನಗದು, ಮದ್ಯ, ವಿವಿಧ ವಸ್ತುಗಳನ್ನು ಜಪ್ತಿ ಮಾಡಿದೆ.
9.64 ಕೋಟಿ ರೂಪಾಯಿ ನಗದು, 36.41 ಕೋಟಿ ರೂಪಾಯಿ ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 1.63 ಕೋಟಿ ರೂಪಾಯಿ ಮೌಲ್ಯದ ಇತರೆ ವಸ್ತುಗಳನ್ನು ಜಪ್ತಿ ಮಾಡಿರುವುದಾಗಿ ಚುನಾವಣಾ ಅಧಿಕಾರಿ ಕಚೇರಿ ಮಾಹಿತಿ ನೀಡಿದೆ.
ನಗದು, ಮದ್ಯ, ಮಾದಕ ವಸ್ತುಗಳನ್ನು ವಶಪಡಿಸಿಕೊಂಡು 402 ಎಫ್ಐಆರ್ ದಾಖಲಿಸಲಾಗಿದೆ. 65,432 ಶಸ್ತ್ರಾಸ್ತ್ರ ಠೇವಣಿ ಮಾಡಲಾಗಿದ್ದು, 831 ಶಾಸ್ತ್ರ ಅಸ್ತ್ರ ವಶಪಡಿಸಿಕೊಳ್ಳಲಾಗಿದೆ. 8 ಶಸ್ತ್ರಾಸ್ತ್ರ ಪರವಾನಿಗಿ ರದ್ದು ಮಾಡಲಾಗಿದೆ. ಸಿಆರ್ಪಿಸಿ ತಡೆಗಟ್ಟುವ ವಿಭಾಗದಲ್ಲಿ 3853 ಪ್ರಕರಣ ದಾಖಲಿಸಲಾಗಿದೆ. 22.85 ಕೋಟಿ ರೂಪಾಯಿ ಮೌಲ್ಯದ 7.20 ಲಕ್ಷ ಲೀಟರ್ ಮದ್ಯ, 53.37 ಲಕ್ಷದ ಮಾದಕ ವಸ್ತುಗಳು, 2 ಕೆಜಿ ಚಿನ್ನ, 9 ಲಕ್ಷ ರೂಪಾಯಿ ಮೌಲ್ಯದ ವಜ್ರ ಜಪ್ತಿ ಮಾಡಲಾಗಿದೆ.