ನವದೆಹಲಿ: ಭಾರತೀಯ ಚುನಾವಣಾ ಆಯೋಗ(ಇಸಿಐ) ಭಾನುವಾರ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರ ಹಾಡನ್ನು ನಿಷೇಧಿಸಿದೆ.
ಇಸಿಐ ನಿರ್ಧಾರವನ್ನು ಟೀಕಿಸಿ ಶಾಸಕ ಅತಿಶಿ ಮರ್ಲೆನಾ ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ವಿರೋಧ ಪಕ್ಷದ ನಾಯಕರನ್ನು ಮಣಿಸಲು ಬಿಜೆಪಿಯು ಇಡಿ ಮತ್ತು ಸಿಬಿಐ ಬಳಸಿದೆ. ವಿಪಕ್ಷ ನಾಯಕರ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಬಂಧನ ಮಾಡಲಾಗುತ್ತದೆ ಎಂದು ಪ್ರಚಾರದ ಹಾಡಲ್ಲಿ ಹೇಳಿದರೆ ಚುನಾವಣಾ ಆಯೋಗಕ್ಕೆ ಸಮಸ್ಯೆಯಾಗುತ್ತದೆ. ಇದು ಸರ್ವಾಧಿಕಾರಿ ಸರ್ಕಾರದ ಲಕ್ಷಣ ಅಷ್ಟೆ. ಭಾರತೀಯ ಚುನಾವಣಾ ಆಯೋಗ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರ ಹಾಡನ್ನು ನಿಷೇಧಿಸಿದೆ ಎಂದು ಹೇಳಿದ್ದಾರೆ.