ನವದೆಹಲಿ: ಲೋಕಸಭೆ ಚುನಾವಣೆಗಾಗಿ, ಭಾರತೀಯ ಜನತಾ ಪಕ್ಷ ಬುಧವಾರ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಉಸ್ತುವಾರಿ ಮತ್ತು ಸಹ-ಪ್ರಭಾರಿಗಳನ್ನು ಘೋಷಿಸಿತು.
ಕ್ಯಾಪ್ಟನ್ ಅಭಿಮನ್ಯು -ಅಸ್ಸಾಂ, ನಿತಿನ್ ನಬಿನ್- ಛತ್ತೀಸ್‌ಗಢ, ಒಪಿ ಧಂಖಡ್- ದೆಹಲಿ, ದಿನೇಶ್ ಶರ್ಮಾ- ಮಹಾರಾಷ್ಟ್ರ, ಎಂ ಚುಬಾ ಆವೊ- ಮೇಘಾಲಯ, ಅಜೀತ್ ಘೋಪ್‌ಚಾಡೆ- ಮಣಿಪುರ, ದೇವೇಶ್ ಕುಮಾರ್- ಮಿಜೋರಾಂ, ನಳಿನ್ ಕೊಹ್ಲಿ- ನಾಗಾಲ್ಯಾಂಡ್, ಅಭಯ್ ಪಾಟೀಲ್- ತೆಲಂಗಾಣಕ್ಕೆ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ.
ಪಕ್ಷವು ರಾಜ್ಯಸಭಾ ಸಂಸದ ಮತ್ತು ಉತ್ತರ ಪ್ರದೇಶದ ಮಾಜಿ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರನ್ನು ಮಹಾರಾಷ್ಟ್ರದ ಚುನಾವಣಾ ಉಸ್ತುವಾರಿಯಾಗಿ ನೇಮಿಸಿದೆ ಮತ್ತು ಹರ್ಯಾಣ ಬಿಜೆಪಿಯ ಮಾಜಿ ಮುಖ್ಯಸ್ಥ ಓಪಿ ಧನಕರ್ ಅವರನ್ನು ದೆಹಲಿಗೆ ನೇಮಿಸಲಾಗಿದೆ.
ಚುನಾವಣಾ ಸಹ-ಪ್ರಭಾರಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
ಶ್ರೀರಘುನಾಥ ಕುಲಕರ್ಣಿ- ಅಂಡಮಾನ್ ಮತ್ತು ನಿಕೋಬಾರ್
ಅಲ್ಕಾ ಗುಜ್ಜರ್-ದೆಹಲಿ
ನಳಿನ್ ಕುಮಾರ್ ಕಟೀಲ್-ಕೇರಳ
ನಿರ್ಮಲ್ ಕುಮಾರ್ ಸುರಾನಾ- ಮಹಾರಾಷ್ಟ್ರ
ಜೈಭನ್ ಸಿಂಗ್ ಪವಯ್ಯ- ಮಹಾರಾಷ್ಟ್ರ
ಸಂಜೀವ್ ಚೌರೈಸಾ- ಉತ್ತರ ಪ್ರದೇಶ
ರಮೇಶ್ ಬಿಧುರಿ- ಯುಪಿ
ಸಂಜಯ್ ಭಾಟಿಯಾ- ಯುಪಿ