alex Certify BIG NEWS: ಬಿಜೆಪಿ ಗೆಲುವಿನ ಅಂತರ ಕುಸಿತ ? 6 ನೇ ಹಂತದ ಚುನಾವಣೆ ಬಳಿಕ ತನ್ನ ಭವಿಷ್ಯವಾಣಿಯನ್ನೇ ಬದಲಿಸಿದ ‘ಸಟ್ಟಾ ಬಜಾರ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಜೆಪಿ ಗೆಲುವಿನ ಅಂತರ ಕುಸಿತ ? 6 ನೇ ಹಂತದ ಚುನಾವಣೆ ಬಳಿಕ ತನ್ನ ಭವಿಷ್ಯವಾಣಿಯನ್ನೇ ಬದಲಿಸಿದ ‘ಸಟ್ಟಾ ಬಜಾರ್’

article-image

ಲೋಕಸಭೆ ಚುನಾವಣೆಯ ಕೊನೆಯ ಹಂತ ಬಾಕಿಯಿರುವಾಗಲೇ ರಾಜಸ್ಥಾನದ ಬೆಟ್ಟಿಂಗ್ ಮಾರ್ಕೆಟ್ ಫಲೋಡಿ ಸಟ್ಟಾ ಬಜಾರ್, ಆರನೇ ಹಂತದ ಚುನಾವಣೆಯ ನಂತರ ಯಾರಿಗೆ ಎಷ್ಟು ಸ್ಥಾನ ಎನ್ನುವ ವಿಚಾರದಲ್ಲಿ ಮತ್ತೊಂದು ಭವಿಷ್ಯ ಹೇಳಿದೆ. ಬಿಜೆಪಿ ಮೈತ್ರಿಕೂಟ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದಿರುವ ಬಜಾರ್, ಬಿಜೆಪಿ ನಿರೀಕ್ಷಿಸಿದಷ್ಟು ಸ್ಥಾನ ಪಡೆಯುವುದು ಕಷ್ಟವೆಂದಿದೆ. ಕೆಲವು ದಿನಗಳ ಹಿಂದೆ ತಾನು ಭವಿಷ್ಯ ನುಡಿದಿದ್ದಕ್ಕಿಂತ ಇದೀಗ 10 ಸ್ಥಾನಗಳು ಕಡಿಮೆಯಾಗುತ್ತವೆ ಎಂದು ಆರನೇ ಚುನಾವಣೆ ಬಳಿಕ ತಿಳಿಸಿದೆ.

ಬಾಜಿ ಕಟ್ಟುವ ಮಾರ್ಕೆಟ್ ಫಲೋಡಿ ಸಟ್ಟಾ ಬಜಾರ್ ಮಾಹಿತಿ ಪ್ರಕಾರ ಬಿಜೆಪಿ 543 ಸ್ಥಾನಗಳಲ್ಲಿ 290 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಬಿಜೆಪಿ ಸ್ವಂತ ಬಹುಮತ ಪಡೆಯಲಿದೆ. ಈ ಹಿಂದೆ ಬಿಜೆಪಿ 300 ಸ್ಥಾನಗಳನ್ನು ಗೆಲ್ಲಲಿದೆ ಎಂದು ಫಲೋಡಿ ಸಟ್ಟಾ ಬಜಾರ್ ವರದಿಗಳು ಸೂಚಿಸಿದ್ದವು. ಆದರೆ ಇದೀಗ ಗೆಲ್ಲುವ ಸೀಟ್ ಗಳು ಕಮ್ಮಿಯಾಗಿವೆ ಎಂದು ಅಂದಾಜಿಸಲಾಗಿದೆ.

ರಾಜಸ್ಥಾನದ ಜೋಧ್‌ಪುರ್ ಜಿಲ್ಲೆಯ ಸಣ್ಣ ಪಟ್ಟಣವಾದ ಫಲೋಡಿ, ಚುನಾವಣಾ ಸಂಬಂಧಿತ ಬೆಟ್ಟಿಂಗ್ ಅಷ್ಟೇ ಅಲ್ಲದೇ ಕ್ರೀಡೆ ಸೇರಿದಂತೆ ಆಸಕ್ತಿದಾಯಕ ವಿಷಯಗಳಲ್ಲಿ ಬೆಟ್ಟಿಂಗ್ ನಡೆಸುವ ಪ್ರಮುಖ ಕೇಂದ್ರವೆಂದು ಹೆಸರುವಾಸಿಯಾಗಿದೆ. ಇದರ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಈಗ 340-350 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ, ಇದು ಮೂರನೇ ಎರಡರಷ್ಟು ಬಹುಮತಕ್ಕಿಂತ ಕಡಿಮೆಯಾಗಿದೆ. ಕಾಂಗ್ರೆಸ್ ಪಕ್ಷವು ಸುಮಾರು 50-51 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ.

ಈ ಬದಲಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಒಳಗಿನ ಇತರ ಪಕ್ಷಗಳ ಮಾತುಕತೆಗಳು, ಕಡಿಮೆ ಮತದಾನದ ಪ್ರಮಾಣ ಮತ್ತು ಚುನಾವಣಾ ಬಾಂಡ್‌ಗಳ ಮೇಲಿನ ಸುಪ್ರೀಂ ಕೋರ್ಟ್ ತೀರ್ಪು ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.

ಪ್ರಸ್ತುತ ಸಟ್ಟಾ ಮಾರುಕಟ್ಟೆಯು ಬಿಜೆಪಿಗೆ 300-303 ಸ್ಥಾನಗಳನ್ನು ಪಡೆದುಕೊಳ್ಳಲು 1:1 ದರವನ್ನು ನೀಡುತ್ತದೆ, ಅಂದರೆ 1 ರೂಗಳ ಬಾಜಿಯು ರೂ 1 ಲಾಭವನ್ನು ನೀಡುತ್ತದೆ. ಆದಾಗ್ಯೂ 320 ಸ್ಥಾನಗಳಿಗೆ ದರವು 2.25 ಆಗಿದೆ, ಇದು ಹೆಚ್ಚಿನ ಅದಾಯವನ್ನು ಸೂಚಿಸುತ್ತದೆ. ಆದ್ದರಿಂದ 320 ಸೀಟುಗಳ ಮೇಲೆ 100 ರೂಪಾಯಿಗಳ ಬೆಟ್ 225 ರೂಪಾಯಿಗಳ ಲಾಭವನ್ನು ತರುತ್ತದೆ. ಫಲೋಡಿ ಬಜಾರ್‌ನ ಭವಿಷ್ಯವಾಣಿಗಳನ್ನು ಹೊರತುಪಡಿಸಿ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಇತರೆ ಭವಿಷ್ಯವಾಣಿಯೊಂದರಲ್ಲಿ ಆಡಳಿತಾರೂಢ ಎನ್‌ಡಿಎ ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...