ನವದೆಹಲಿ: ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿದ್ದು, ಯುಪಿಯಲ್ಲಿ ಕಾಂಗ್ರೆಸ್ 17, ಅಖಿಲೇಶ್ ಯಾದವ್ ಅವರ ಎಸ್‌ಪಿ, ಇತರರು 63 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದಾರೆ.
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಮುಖ ಪಾತ್ರ ವಹಿಸಿದ್ದಾರೆ. ಅಖಿಲೇಶ್ ಯಾದವ್ ಮತ್ತು ಪ್ರಿಯಾಂಕಾ ಗಾಂಧಿ ನಡುವಿನ ಮಾತುಕತೆ ಯಶಸ್ವಿಯಾಗಿದೆ.ದೂರವಾಣಿ ಮೂಲಕ ಚರ್ಚಿಸಿ ಕ್ಷೇತ್ರಗಳ ಹಂಚಿಕೆ ಫೈನಲ್ ಮಾಡಲಾಗಿದೆ.
ಕಾಂಗ್ರೆಸ್ ಕ್ಷೇತ್ರಗಳು
ರಾಯ್ ಬರೇಲಿ
ಅಮೇಥಿ
ಕಾನ್ಪುರ್ ನಗರ
ಫತೇಪುರ್ ಸಿಕ್ರಿ
ಬನ್ಸ್ಗಾಂವ್
ಸಹರಾನ್ಪುರ್
ಪ್ರಯಾಗ್ರಾಜ್
ಮಹಾರಾಜಗಂಜ್
ವಾರಣಾಸಿ
ಅಮ್ರೋಹಾ
ಝಾನ್ಸಿ
ಬುಲಂದ್‌ಶಹರ್
ಗಾಜಿಯಾಬಾದ್
ಮಥುರಾ
ಸೀತಾಪುರ
ಬಾರಾಬಂಕಿ
ಡಿಯೋರಿಯಾ
ಉಳಿದ 63 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ ಮತ್ತು ಇತರ I.N.D.I.A ಬ್ಲಾಕ್ ಪಾಲುದಾರರು ಸ್ಪರ್ಧಿಸಲಿದ್ದಾರೆ.