
ನವದೆಹಲಿ: ಎರಡನೇ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಲೋಕಸಭೆ ಚುನಾವಣೆಗೆ 7 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಕಾಂಗ್ರೆಸ್ ಸೋಮವಾರ ಪ್ರಕಟಿಸಿದೆ. ಬಿಹಾರಕ್ಕೆ ಐವರು ಮತ್ತು ಪಂಜಾಬ್‌ಗೆ ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿದೆ.
ಬಿಹಾರದಲ್ಲಿ ಕಾಂಗ್ರೆಸ್ ಪಕ್ಷವು ಪಶ್ಚಿಮ ಚಂಪಾರಣ್‌ನಿಂದ ಮೋಹನ್ ತಿವಾರಿ, ಮುಜಾಫರ್‌ಪುರದಿಂದ ಅಜಯ್ ನಿಶಾದ್, ಮಹಾರಾಜ್‌ಗಂಜ್‌ನಿಂದ ಆಕಾಶ್ ಪ್ರಸಾದ್ ಸಿಂಗ್, ಸಮಸ್ತಿಪುರದಿಂದ ಸನ್ನಿ ಹಜಾರಿ ಮತ್ತು ಸಸಾರಾಮ್‌ನಿಂದ ಮನೋಜ್ ಕುಮಾರ್ ಅವರನ್ನು ಹೆಸರಿಸಿದೆ. ಪಂಜಾಬ್‌ನ ಹೋಶಿಯಾರ್‌ಪುರದಿಂದ ಯಾಮಿನಿ ಗೋಮರ್ ಮತ್ತು ಫರೀದ್‌ಕೋಟ್‌ನಿಂದ ಅಮರ್ಜಿತ್ ಕೌರ್ ಸಾಹೋಕೆ ಅವರನ್ನು ಹೆಸರಿಸಿದೆ.