alex Certify ಬಿಗ್​ ನ್ಯೂಸ್​: ರಾಜ್ಯದಲ್ಲಿ ಲಾಕ್​ಡೌನ್​ ಜೂನ್​ 14ರವರೆಗೆ ವಿಸ್ತರಣೆ, 500 ಕೋಟಿ ಮೌಲ್ಯದ ವಿಶೇಷ ಪ್ಯಾಕೇಜ್​ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್​ ನ್ಯೂಸ್​: ರಾಜ್ಯದಲ್ಲಿ ಲಾಕ್​ಡೌನ್​ ಜೂನ್​ 14ರವರೆಗೆ ವಿಸ್ತರಣೆ, 500 ಕೋಟಿ ಮೌಲ್ಯದ ವಿಶೇಷ ಪ್ಯಾಕೇಜ್​ ಘೋಷಣೆ

ರಾಜ್ಯದಲ್ಲಿ ಕೊರೊನಾ ಲಾಕ್​ಡೌನ್​ ಅವಧಿಯನ್ನ ಸಿಎಂ ಬಿ.ಎಸ್.​ ಯಡಿಯೂರಪ್ಪ ಜೂನ್​​ 14ನೇ ತಾರೀಖು ಬೆಳಗ್ಗೆ ಆರು ಗಂಟೆಯವರೆಗೆ ವಿಸ್ತರಿಸಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಸ್ತುತ ಇರುವ ಕೊರೊನಾ ಪರಿಸ್ಥಿತಿಯನ್ನ ಗಮನಿಸಿ ಆರೋಗ್ಯ ತಜ್ಞರು ನೀಡಿರುವ ಸಲಹೆಗಳನ್ನ ಪರಿಗಣಿಸಿ ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಹೇಳಿದ್ರು.

500 ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಿದ ಸಿಎಂ ಯಡಿಯೂರಪ್ಪ ನೇಕಾರರು, ಮೀನುಗಾರರು ಹಾಗೂ ಚಿತ್ರರಂಗದವರಿಗೆ ಸೇರಿದಂತೆ ಹಲವು ಸಮುದಾಯದವರಿಗೆ 2ನೇ ಪ್ಯಾಕೇಜ್​ನಲ್ಲಿ ಅನುದಾನ ನೀಡಿದ್ದಾರೆ. ನೇಕಾರರು, ಪವರ್​ ಲೂಮ್​ಗೆ 3 ಸಾವಿರ ರೂಪಾಯಿ ಪರಿಹಾರ, ಮೀನುಗಾರರಿಗೆ ತಲಾ 3 ಸಾವಿರ ರೂಪಾಯಿ ಪರಿಹಾರ ಘೋಷಣೆಯಾಗಿದೆ. ಇದರಿಂದ 18 ಸಾವಿರ ಮೀನುಗಾರರಿಗೆ ಲಾಭವಾಗಿದೆ. ಚಲನಚಿತ್ರ ರಂಗದ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೂ ಮೂರು ಸಾವಿರ ರೂಪಾಯಿ ಅನುದಾನ ಘೋಷಣೆಯಾಗಿದೆ.

ದೋಣಿ ಮಾಲೀಕರಿಗೆ, ಆಶಾಕಾರ್ಯಕರ್ತೆಯರು, ಮುಜರಾಯಿ ಇಲಾಖೆ ಸಿಬ್ಬಂದಿ, ಮಸೀದಿಯ ಕೇಶ್​ ಇಮಾಮ್​​ಗಳಿಗೆ, ಅಡುಗೆ ಸಿಬ್ಬಂದಿಗೆ 3 ಸಾವಿರ ರೂಪಾಯಿ, ಅನುದಾನ ಘೋಷಣೆಯಾಗಿದೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ 2 ಸಾವಿರ ರೂಪಾಯಿ ಪರಿಹಾರ ಸಿಗಲಿದೆ.
ನ್ಯಾಯವಾದಿಗಳ ಕಲ್ಯಾಣ ನಿಧಿಗೆ 5 ಕೋಟಿ ಪರಿಹಾರ ನಿಧಿ, ಅನುದಾನ ರಹಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 5 ಸಾವಿರ ರೂಪಾಯಿ ಪರಿಹಾರ, ಸಣ್ಣ ಕೈಗಾರಿಕೆಗಳಿಗೆ ವಿದ್ಯುತ್​ ಶುಲ್ಕ ಪಾವತಿಯಿಂದ ವಿನಾಯ್ತಿ ಸಿಗಲಿದೆ.

ಶಾಲಾ ಮಕ್ಕಳಿಗೆ ಜೂನ್​-ಜುಲೈ ತಿಂಗಳಲ್ಲಿ ಹಾಲಿನ ಪುಡಿ ನೀಡುವುದು ಹಾಗೂ ಹೋಟೆಲ್​ಗಳನ್ನ ಸಂಜೆಯವರೆಗೂ ತೆರೆಯಬಹುದು. ಆದರೆ ಪಾರ್ಸೆಲ್​ಗೆ ಮಾತ್ರ ಅವಕಾಶ ಇರಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...