ಕೋವಿಡ್-19ನ ಹೊಸ ಅವತಾರಿ ಒಮಿಕ್ರಾನ್ ವ್ಯಾಪಿಸುತ್ತಿರುವ ಬೆನ್ನಲ್ಲೇ ಎಲ್ಲೆಡೆ ಭೀತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ, ತಮ್ಮ ಸರ್ಕಾರವು ಈ ವೈರಾಣುವಿನ ಬಾಧೆಯನ್ನು ಎದುರಿಸಲು ಸಂಪೂರ್ಣ ಸಜ್ಜಾಗಿರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
“ಗಾಬರಿಯಾಗಬೇಕಾದ ಅಗತ್ಯವಿಲ್ಲ. ನಾನು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್‌ಗಳನ್ನು ಧರಿಸಲು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಮಾಸ್ಕ್‌ಧಾರಣೆ ಬಹಳ ಮುಖ್ಯ. ಹಾಸಿಗೆಗಳು, ಮದ್ದು ಹಾಗೂ ಆಮ್ಲಜನಕದ ಲಭ್ಯತೆಯ ಕುರಿತಂತೆ ನಾವಾಗಲೇ ಸಭೆಗಳಲ್ಲಿ ಚರ್ಚಿಸಿದ್ದೇವೆ,” ಎಂದಿರುವ ಕೇಜ್ರಿವಾಲ್, ಸದ್ಯಕ್ಕೆ ದೆಹಲಿಯಲ್ಲಿ ಲಾಕ್‌ಡೌನ್ ಹೇರುವ ಆಲೋಚನೆ ಇಲ್ಲ ಎಂದಿದ್ದಾರೆ.
ಫ್ಯಾನ್ ಗೆ ಏಕೆ ಮೂರು ರೆಕ್ಕೆಗಳು ಇರುತ್ತವೆ ಗೊತ್ತಾ….?
ಇದೇ ಮಾತನ್ನು ಪುನರುಚ್ಛರಿಸಿದ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್, ದೆಹಲಿ ಸರ್ಕಾರವು ಕೋವಿಡ್ ಪ್ರಕರಣಗಳ ದಟ್ಟಣೆಯನ್ನು ಗಮನಿಸಿ ಹಂತಹಂತವಾದ ಪ್ರತಿಕ್ರಿಯಾ ಕ್ರಿಯಾ ಯೋಜನೆಗೆ ಮುಂದಾಗುವುದಾಗಿ ತಿಳಿಸಿದ್ದಾರೆ.
ಈ ಯೋಜನೆಯಡಿ, ಪರೀಕ್ಷೆಗೆ ಒಳಪಟ್ಟ ಪ್ರತಿ 1000 ಮಂದಿಯಲ್ಲಿ 5 ಮಂದಿಗೆ ಕೋವಿಡ್ ಪಾಸಿಟಿವ್ ಕಂಡುಬಂದಲ್ಲಿ, ಮೊದಲ ಹಂತದ ಪ್ರತಿಕ್ರಿಯೆಗೆ ಮುಂದಾಗಲಾಗುವುದು. ಇದೇ ದರ 10 ಮಂದಿಗ ತಲುಪಿದಲ್ಲಿ, ಎರಡನೇ ಹಂತ ಹಾಗೂ ಹೀಗೆ ಮುಂದುವರೆದು 14-15/1000 ಮಂದಿ ಪಾಸಿಟಿವ್ ಕಂಡುಬಂದಲ್ಲಿ ರೆಡ್ ಅಲರ್ಟ್ ಘೋಷಿಸಲಾಗುವುದು.
ಹೂಡಿಕೆಯಿಲ್ಲದೆ ಐಸಿಐಸಿಐ ಡೈರೆಕ್ಟ್ ನೊಂದಿಗೆ ಮನೆಯಲ್ಲಿ ಕುಳಿತು ಗಳಿಸಿ ಹಣ
“ಸದ್ಯಕ್ಕೆ ದೆಹಲಿಯಲ್ಲಿ ಕೋವಿಡ್ ಪೀಡಿತರ ದರವು 0.5%ನಷ್ಟಿದ್ದು, ಲಾಕ್‌ಡೌನ್ ಹೇರುವ ಅಗತ್ಯವಿಲ್ಲ,” ಎಂದು ಜೈನ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಭಾನುವಾರದಂದು 63 ಮಂದಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ಕಂಡು ಬಂದಿದೆ. ಇದು ನಾಲ್ಕು ತಿಂಗಳ ಅವಧಿಯಲ್ಲಿ ಒಂದೇ ದಿನದಂದು ದಾಖಲಾದ ಅತಿ ಹೆಚ್ಚಿನ ಸಂಖ್ಯೆಯ ಪಾಸಿಟಿವ್ ಕೇಸ್‌ಗಳಾಗಿವೆ. ಇದೇ ದಿನ ದೆಹಲಿಯಲ್ಲಿ ಮೊದಲ ಬಾರಿಗೆ ಒಮಿಕ್ರಾನ್ ಪ್ರಕರಣ ದಾಖಲಾಗಿದೆ.