ಲಖ್ನೋ: ಉತ್ತರ ಪ್ರದೇಶದಲ್ಲಿ ಕೊರೋನಾ ಸೋಂಕು ತೀವ್ರ ಏರಿಕೆ ಹಿನ್ನಲೆಯಲ್ಲಿ 5 ನಗರಗಳಲ್ಲಿ ಲಾಕ್ಡೌನ್ ಜಾರಿ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.
ವಾರಣಾಸಿ, ಪ್ರಯಾಗ್ ರಾಜ್, ಕಾನ್ಪುರ್, ಲಖ್ನೋ ಮತ್ತು ಗೋರಖ್ ಪುರದಲ್ಲಿ ಏಪ್ರಿಲ್ 26 ರವರೆಗೆ ಲಾಕ್ಡೌನ್ ಜಾರಿ ಮಾಡಲು ಅಲಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿದೆ. ಉತ್ತರ ಪ್ರದೇಶದಲ್ಲಿ ಸೋಂಕು ತೀವ್ರ ಏರಿಕೆ ಹಿನ್ನಲೆಯಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಿದ್ದು, 5 ನಗರಗಳಲ್ಲಿ ಸೋಂಕು ನಿಯಂತ್ರಣಕ್ಕೆ ಏಪ್ರಿಲ್ 26 ರವರೆಗೆ ಲಾಕ್ ಡೌನ್ ಜಾರಿ ಮಾಡಲು ಆದೇಶಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ಉಲ್ಬಣಗೊಳ್ಳುತ್ತಿರುವ ಕೊರೋನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 5 ನಗರಗಳಲ್ಲಿ ಲಾಕ್‌ಡೌನ್ ತರಹದ ನಿರ್ಬಂಧಗಳನ್ನು ಜಾರಿಗೊಳಿಸಲು ಆದೇಶಿಸಿದೆ. ನ್ಯಾಯಮೂರ್ತಿಗಳಾದ ಅಜಿತ್ ಕುಮಾರ್ ಮತ್ತು ಸಿದ್ಧಾರ್ಥ ವರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ಯೋಗಿ ಸರ್ಕಾರಕ್ಕೆ ಕಠಿಣ ನಿರ್ದೇಶನ ನೀಡಿದೆ.