
ಬೆಂಗಳೂರು: ಬೆಂಗಳೂರಿನ ತಿಲಕ್ ನಗರದ ಎಸ್.ಆರ್.ಕೆ. ಗಾರ್ಡನ್ ನಲ್ಲಿ ಮನೆ ಬೀಗ ಮುರಿದು 3.5 ಕೆಜಿ ಚಿನ್ನ, 10 ಲಕ್ಷ ರೂಪಾಯಿ ನಗದು ಕಳವು ಮಾಡಲಾಗಿದೆ.
ಮನೆಯವರು ರಾಮನಗರಕ್ಕೆ ಹೋಗಿದ್ದಾಗ ಘಟನೆ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಗಮನಿಸಿ ಕಳ್ಳ ಕೃತ್ಯವೆಸಗಿದ್ದಾನೆ. ಮಗಳ ಮದುವೆಗೆಂದು ಚಿನ್ನಾಭರಣ ಮಾಡಿಸಿ ಮನೆಯಲ್ಲಿ ಇಡಲಾಗಿತ್ತು. ಮನೆಯವರು ಊರಿಗೆ ಹೋಗಿದ್ದನ್ನು ತಿಳಿದು ವೇಳೆ ಕಳ್ಳತನ ಮಾಡಲಾಗಿದೆ.
ಮಾಹಿತಿ ತಿಳಿದ ತಿಲಕ್ ನಗರ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿದ್ದು, ಸಿಸಿ ಕ್ಯಾಮೆರಾದಲ್ಲಿ ಓರ್ವ ಮನೆಗೆ ಬಂದಿರುವ ದೃಶ್ಯ ಸೆರೆಯಾಗಿದೆ. ಕಳ್ಳನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.