![](https://kannadadunia.com/wp-content/uploads/2023/02/23568.png)
ಈ ವ್ಯಕ್ತಿ ಗೋವಾದ ಕಲಂಗುಟ್ ಬೀಚಿನಲ್ಲಿ ಅಂಗಡಿಯೊಂದನ್ನು ಹೊಂದಿದ್ದು, ಅಲ್ಲಿಗೆ ಭೇಟಿ ನೀಡಿದ್ದ ವ್ಲಾಗರ್ ಒಬ್ಬರು ನೀವು ಯಾವ ತಂಡವನ್ನು ಬೆಂಬಲಿಸುತ್ತೀರಿ ಎಂದು ಪ್ರಶ್ನಿಸಿದ್ದರು. ಅದಕ್ಕೆ ನಾನು ಪಾಕಿಸ್ತಾನ ತಂಡವನ್ನು ಬೆಂಬಲಿಸುತ್ತೇನೆ ಎಂದು ಈತ ಹೇಳಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಕೆರಳಿದ್ದ ಹಲವರು, ಆ ವ್ಯಕ್ತಿಯ ಅಂಗಡಿಗೆ ತೆರಳಿ ಕ್ಷಮೆ ಕೇಳಲು ಪಟ್ಟು ಹಿಡಿದಿದ್ದರು. ಇದಕ್ಕೆ ಮಣಿದ ಆ ವ್ಯಕ್ತಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಲ್ಲದೇ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದಾನೆ.